ನ್ಯೂಸ್

ಮದುವೆಯಾಗಿಲ್ಲ ಆದರೂ ಕೂಡ ಈತ 100 ಮಕ್ಕಳ ತಂದೆ; ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ...

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮದುವೆಯಾಗುವ ಬದಲು ಒಂಟಿಯಾಗಿರಲು ಬಯಸುತ್ತಾರೆ. ಮದುವೆಯ ನಂತರ ಕೌಟುಂಬಿಕ ಹೊರೆ, ಎಲ್ಲ ರೀತಿಯ ಟೆನ್ಶನ್ ಗಳನ್ನು ನಿಭಾಯಿಸುವುದು ಯುವಕರಿಗೆ ಕಷ್ಟವಾಗಿದ್ದು, ಡೇಟಿಂಗ್ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ.   ಕೆಲವರು ಮದುವೆಯಾಗದಿದ್ದರೂ ಬಾಡಿಗೆ ತಾಯ್ತನದ ಮೂಲಕ ಮಹಿಳೆಯರು ಮಕ್ಕಳನ್ನು ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿ ಮದುವೆಯಾಗದೆ 100 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದನು. ಈ ಕುರಿತಾದ ಇಂಟ್ರಸ್ಟಿಂಗ್​ ಸಂಗತಿಯನ್ನು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

12 ದೇಶಗಳಲ್ಲಿ ತನ್ನಿಂದ ಮಕ್ಕಳನ್ನು ಪಡೆದಿದ್ದೇನೆ ಎಂದು ಅವನು ಹೇಳಿಕೊಂಡಿದ್ದಾನೆ. ಅವನು ಯಾರು? ನೂರು ಮಕ್ಕಳ ತಂದೆಯಾದದ್ದು ಹೇಗೆ? ಅದರ ಬಗ್ಗೆ ತಿಳಿದುಕೊಳ್ಳೋಣ...

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ (39) ಅವರಿಗೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈತನಿಗೆ ಇನ್ನೂ ಮದುವೆಯಾಗಿಲ್ಲ.. ಆದರೆ 100ಕ್ಕೂ ಹೆಚ್ಚು ಮಕ್ಕಳಿದ್ದಾರೆ. ವಿಶ್ವದ 12 ದೇಶಗಳಲ್ಲಿ ತನಗೆ ಮಕ್ಕಳಿದ್ದಾರೆ ಎಂದು ಪೊವೆಲ್ ಹೇಳಿದ್ದಾರೆ. ಈ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮದುವೆಯಾಗದೆ ನೂರು ಮಕ್ಕಳ ತಂದೆಯಾದದ್ದು ಹೇಗೆ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ
ಮದುವೆಯಾಗದೇ ಇಷ್ಟು ಮಕ್ಕಳ ತಂದೆಯಾದದ್ದು ಹೇಗೆ ಎಂಬುದಕ್ಕೆ ಪೊವೆಲ್ ಸ್ಪಷ್ಟನೆ ನೀಡಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ಪಾವೆಲ್ ಡುರೊವ್ ಇನ್ನೂ ಮದುವೆಯಾಗಿಲ್ಲ. ಆದರೆ ಅವರು ತಮ್ಮ ವೀರ್ಯದ ಮೂಲಕ ಇದುವರೆಗೆ 100 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದಾರೆ. ಇದರ ಹಿಂದೆ ಬಲವಾದ ಕಾರಣವಿದೆ ಅಂತೆ.

15 ವರ್ಷಗಳ ಹಿಂದೆ, ಅವರು 24 ವರ್ಷದವರಾಗಿದ್ದಾಗ,  ಮಕ್ಕಳಾಗುವುದಿಲ್ಲ ಎಂದು ನಿರ್ಧರಿಸಿದ ದಂಪತಿಗೆ  ವೀರ್ಯ ದಾನದಿಂದ ಮಗುವನ್ನು ಹೊಂದಲು  ಸಹಾಯವಾಗುತ್ತದೆ ಎಂದು ಸ್ನೇಹಿತನ ಸಲಹೆ ನೀಡಿದ್ದ. ಗೆಳೆಯ ಹೇಳಿದ ಮಾತನ್ನು ಕೇಳಿ ಆಶ್ಚರ್ಯಪಟ್ಟು ನಕ್ಕಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಮಕ್ಕಳಿಲ್ಲದಿರುವುದು ಬಹಳ ದೊಡ್ಡ ಸಮಸ್ಯೆ ಎಂದು ನಂತರ  ತಿಳಿಯಿತು, ಅನೇಕ ಪೋಷಕರು ಖಿನ್ನತೆಯಿಂದ ಬಳಲುತ್ತಿದ್ದಾರೆ. ತನ್ನಿಂದಾಗಿ ಇತರರು ಸಂತೋಷಪಡುತ್ತಾರೆ ಎಂದು ತಿಳಿದು ವೀರ್ಯಾಣು ದಾನ ಮಾಡಲು ಪ್ರಾರಂಭಿಸಿದೆ . ಆರೋಗ್ಯವಂತ ವೀರ್ಯ ಕೋಶಗಳನ್ನು ದಾನ ಮಾಡುವವರು ಬಹಳ ಕಡಿಮೆ ಇದ್ದಾರೆ. ವೀರ್ಯಾಣು ದಾನ ಮಾಡುವುದು ಸಾಮಾಜಿಕ ಜವಾಬ್ದಾರಿಯಾಗಿದೆ .  ವೀರ್ಯ ದಾನದಲ್ಲಿ ನೋಂದಾಯಿಸಿಕೊಂಡಿದ್ದೇನೆ. ಇದುವರೆಗೆ 12 ದೇಶಗಳಲ್ಲಿ 100 ಕ್ಕೂ ಹೆಚ್ಚು ದಂಪತಿ ತಮ್ಮ ವೀರ್ಯದಿಂದ ಮಕ್ಕಳನ್ನು ಪಡೆದಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಮೂಲಕವಾಗಿ  ಟೆಲಿಗ್ರಾಮ್ ಸಿಇಒ ಪಾವೆಲ್ 100 ಮಕ್ಕಳ ತಂದೆ ಆಗಿದ್ದಾರೆ.