ನ್ಯೂಯಾರ್ಕ್: ಯಾವುದೇ ಗುರುತಿನ ಚೀಟಿ ಇಲ್ಲದೆಯೇ ಆಲ್ಕೋಹಾಲ್ ಖರೀದಿಸಲು 18 ವರ್ಷದ ಯುವತಿಯೊಬ್ಬಳು ಮಾಡಿದ ಉಪಾಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ.
ಅಮೆರಿಕದ ಯುವತಿಯೊಬ್ಬಳು ಹಿರಿಯ ನಾಗರಿಕಳಂತೆ ವೇಷವನ್ನು ಬದಲಾಯಿಸಿಕೊಂಡು ಎಣ್ಣೆ ಖರಿದೀಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿ ವೈನ್ ಸ್ಟೋರ್ ಮುಂದೆ ವಾಹನ ನಿಲ್ಲಿಸಿ, ತನ್ನ ವೇಷಭೂಷಣ ಬದಲಾಯಿಸಿಕೊಂಡು ವಯಸ್ಸಾದಂತೆ ಕಾಣಲು ಕೂದಲಿಗೆ ಬಿಳಿ ಬಣ್ಣದ ಪೌಡರ್ ಮೆತ್ತಿಕೊಂಡು ಎಣ್ಣೆ ಖರೀದಿಸಿದ್ದಾಳೆ.
ವಿಶೇಷವೆಂದರೆ ಕರೊನಾ ಲಾಕ್ಡೌನ್ ಮಾರ್ಗಸೂಚಿಯು ಸಹ ಯುವತಿಗೆ ವರವಾಗಿದೆ. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಯಾರು ಗುರುತು ಹಿಡಿದಿಲ್ಲ. ತಮ್ಮ ಹದಿಹರೆಯದ ನೋಟವನ್ನು ಮರೆಮಾಚಲು ಕೈಕಾಲುಗಳಿಗೆ ಗ್ಲೌಸ್ ಸಹ ಹಾಕಿಕೊಂಡಿದ್ದಳು.
ವೈರಲ್ ಆಗಿರುವ ವಿಡಿಯೋ ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಿಟ್ಟಿಸಿದೆ. ಕೊನೆಗೂ ವೈನ್ಶಾಪ್ನಿಂದ ಆಲ್ಕೋಹಾಲ್ ಪಡೆದಿರುವ ಯುವತಿ, ಇಷ್ಟೆಲ್ಲಾ ಮಾಡಿದ್ದು ತಮಾಷೆಗಾಗಿ ಎಂದು ಹೇಳಿದ್ದಾಳೆ. (ಏಜೆನ್ಸೀಸ್)