ನ್ಯೂಸ್

ತಾಂತ್ರಿಕ ದೋಷ; ಆಕಾಶದಲ್ಲೇ 40 ನಿಮಿಷ ಸುತ್ತಿದ ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನ| indigo

ಹೈದರಾಬಾದ್; ತಿರುಪತಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಆಕಾಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, 40 ನಿಮಿಷಗಳಿಗೂ ಹೆಚ್ಚು ಕಾಲ ಆಕಾಶದಲ್ಲಿ ಗಿರಕಿ ಹೊಡೆದಿದೆ. ಬಳಿಕ ವಿಮಾನ ತಿರುಪತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ Flightradar24 ಪ್ರಕಾರ, ಇಂಡಿಗೊದ ಏರ್‌ಬಸ್ A321neo ವಿಮಾನವು ನಿನ್ನೆ ಸಂಜೆ 7:42 ಕ್ಕೆ ತಿರುಪತಿಯಿಂದ ಹೊರಟಿತು. ಈ ಸಮಯದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನವು ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲಿ ಸುತ್ತುತ್ತಾ ಅಂತಿಮವಾಗಿ ರಾತ್ರಿ 8:34 ಕ್ಕೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ತುರ್ತು ಲ್ಯಾಂಡಿಂಗ್ ಆಯಿತು ಎನ್ನಲಾಗಿದೆ.

(ಏಜೆನ್ಸೀಸ್)

ಇನ್ನೂ ಹೈದರಾಬಾದ್‌ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಯಿತು. ವಿಮಾನ ರದ್ದಾದ ಕಾರಣ ಪ್ರಯಾಣಿಕರು ಹಾಗೂ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಇನ್ನೂ ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.