I LOVE YOU : ತನ್ನದೇ ಶಾಲೆಯ 11 ವರ್ಷದ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಪ್ರೇಮಪತ್ರ ಬರೆದ ಆರೋಪ ಎದುರಿಸುತ್ತಿದ್ದ, ಇದೀಗ ತನಿಖೆ ಎದುರಿಸುತ್ತಿರುವ ವಿಚಿತ್ರ ಘಟನೆ ನಡೆದಿದೆ.
ಇದು ಹೊರ ದೇಶವಾದ ಫ್ಲೋರಿಡಾದ ಬ್ರಾಡೆಂಟನ್‌ನಲ್ಲಿರುವ ಬಿಡಿ ಗುಲ್ಲೆಟ್ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಈ ಘಟನೆ ಸಂಭವಿಸಿದೆ. ಇನ್ನು ಈ ಶಾಲೆಯಲ್ಲಿ ಬೋಧಿಸುತ್ತಿದ್ದ ಜ್ಯಾರೆಟ್ ವಿಲಿಯಮ್ಸ್ ಎಂಬ ಶಿಕ್ಷಕ ಆರೋಪಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಯ ತಾಯಿ ಎರಡು ಪುಟಗಳ ತೊಂದರೆದಾಯಕ ಲೇಟರ್(ಲವ್ ಲೆಟರ್) ಕಂಡುಕೊಂಡ ಕೆಲವೇ ವಾರಗಳ ನಂತರ, ಏಪ್ರಿಲ್ 23 ರಂದು ಶಿಕ್ಷಕ ಜ್ಯಾರೆಟ್ ವಿಲಿಯಮ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ಪತ್ರದಲ್ಲೇನಿದೆ..?
"ನಿಮಗೆ ಗೊತ್ತು, ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತೇನೆ ಮತ್ತು ಏನೇ ಆದರೂ ಅದು ಎಂದಿಗೂ ಬದಲಾಗುವುದಿಲ್ಲ. ನಿನಗೆ ಶಿಕ್ಷಕರಾಗಿರುವುದು ನನಗೆ ತುಂಬಾ ಇಷ್ಟ ಮತ್ತು ಮುಖ್ಯವಾಗಿ, ಈ ವರ್ಷ ನಾವು ಎಷ್ಟು ಹತ್ತಿರವಾಗಿದ್ದೇವೆ ಎಂಬುದು ನನಗೆ ಇನ್ನು ತುಂಬಾ ಇಷ್ಟ" ಎಂಬ ಪತ್ರಕ್ಕೆ ಶಿಕ್ಷಕ ಸಹಿ ಹಾಕಿದ್ದಾನೆ. ಅಲ್ಲದೆ, ವಿದ್ಯಾರ್ಥಿನಿಯೊಂದಿಗೆ ತಮ್ಮ ವಿನಿಮಯವನ್ನು ರಹಸ್ಯವಾಗಿಡಲು ಕೇಳಿಕೊ0ಡಿದ್ದಾನೆ ಎಂದು ವಿದ್ಯಾರ್ಥಿನಿ ತಾಯಿ ಆರೋಪಿಸಿದ್ದಾಳೆ.
ಇದನ್ನೂ ಓದಿ:ಐಫಾ ಪ್ರಶಸ್ತಿ ಪ್ರದಾನ ಸಮಾರಂಭ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ | Sandalwood rises above Bollywood
ತಾಯಿ ಆಕ್ರೋಶ
ಮಂಗಳವಾರ ನಡೆದ ಶಾಲಾ ಮಂಡಳಿಯ ಸಭೆಯಲ್ಲಿ ವಿಲಿಯಮ್ಸ್ ಅವರ ರಾಜೀನಾಮೆಯನ್ನು ಔಪಚಾರಿಕವಾಗಿ ಅಂಗೀಕರಿಸಲಾಗಿದೆ. ಅಲ್ಲದೆ ಸಬೆಯಲ್ಲಿ ಹುಡುಗಿಯ ತಾಯಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಈ ಘಟನೆಯನ್ನು "ಗಂಭೀರ ಮತ್ತು ಘೋರ ದುಷ್ಕೃತ್ಯ" ಎಂದು ಕರೆದಿದ್ದಾರೆ.
ಐದನೇ ತರಗತಿಯ ಈ ಪುರುಷ ಶಿಕ್ಷಕ ನನ್ನ 11 ವರ್ಷದ ಮಗಳನ್ನು ತನ್ನ ತರಗತಿಗೆ ಕರೆದೊಯ್ದು 45 ನಿಮಿಷಗಳ ಕಾಲ ಅವಳೊಂದಿಗೆ ಏಕಾಂಗಿಯಾಗಿ ಕಳೆದನು. ಆದರೆ ಉಳಿದ ವಿದ್ಯಾರ್ಥಿಗಳು ಪ್ರೇಮಿಗಳ ದಿನದಂದು ತಮ್ಮ ವಿಶೇಷ ಕಾರ್ಯಕ್ರಮಗಳಿಗಾಗಿ ಗ್ರಂಥಾಲಯಕ್ಕೆ ಹೋಗಿದ್ದಾರೆ ಎಂದು ವಿದ್ಯಾರ್ಥಿನಿ ತಾಯಿ ಮಂಡಳಿಯ ಸದಸ್ಯರಿಗೆ ಹೇಳಿದನೆಂದು ವರದಿ ಉಲ್ಲೇಖಿಸಿದೆ. ಇದೀಗ ಶಾಲಾ ಮಂಡಳಿ ಇತನ ಕ್ರಮಕ್ಕೆ ಮುಂದಾಗಿದ್ದು, ತನಿಖೆಗೆ ಒಳಪಡಿಸಿದೆ.(ಏಜೆನ್ಸೀಸ್)