ನರೇಗಲ್ಲ: ಶಿಕ್ಷಕರ ದಿನದಂದೇ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಪಟ್ಟಣದ ಜೋಂಡಿಗೇರಿ ಓಣಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದ ಬಸವರಾಜ ಶಿವಪ್ಪ ಹೂಗಾರ (32) ಆತ್ಮಹತ್ಯೆಗೆ ಶರಣಾದವರು. ಇದನ್ನೂ ಓದಿರಿ ತಂದೆ-ಮಗಳ ಸಂಚಿಗೆ ಬಲಿಯಾದಳು ಮನೆಯ ಮಾಲಕಿ, ಬೆಚ್ಚಿಬೀಳಿಸುತ್ತೆ ಕೃತ್ಯ
ಬಸವರಾಜ ಶಿವಪ್ಪ ಹೂಗಾರ ಕೆಲ ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವಾರು ಕಡೆ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.