ನ್ಯೂಸ್

ಟ್ಯಾಕ್ಸಿ ಸೇವೆ ಒದಗಿಸುವ ಉಬರ್​ ಇನ್ನು ಮುಂದೆ ಬಸ್​ ಓಡಿಸಲಿದೆ… ರಾಜಧಾನಿಯಲ್ಲಿ ಹೇಗಿರಲಿದೆ ಈ ಪ್ರೀಮಿಯಂ ಸರ್ವೀಸ್​?

ನವದೆಹಲಿ: ದೆಹಲಿ ಪ್ರೀಮಿಯಂ ಬಸ್ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಸ್‌ಗಳನ್ನು ನಿರ್ವಹಿಸಲು ದೆಹಲಿ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿಯನ್ನು ಉಬರ್ ಪಡೆದುಕೊಂಡಿದೆ.

ಈ ಮೂಲಕ ಬಸ್ ಕಾರ್ಯಾಚರಣೆಗೆ ಪರವಾನಗಿ ನೀಡಿದ ಮೊದಲ ರಾಜ್ಯ ದೆಹಲಿಯಾಗಿದ್ದು, ರೈಡ್ ಹೈಲಿಂಗ್ ಅಪ್ಲಿಕೇಶನ್ ಉಬರ್ ಸಂಸ್ಥೆಯು ದೆಹಲಿ ಪ್ರೀಮಿಯಂ ಬಸ್ ಯೋಜನೆಯಡಿ ಪರವಾನಗಿ ಪಡೆದ ಮೊದಲ ಅಗ್ರಿಗೇಟರ್ ಆಗಿದೆ.

"ಯಶಸ್ವಿ ಪ್ರಾಯೋಗಿಕ ಕಾರ್ಯಕ್ರಮದ ನಂತರ, ನಾವು ಬಸ್‌ಗಳಿಗೆ ಗಮನಾರ್ಹ ಬೇಡಿಕೆಯನ್ನು ಕಂಡಿದ್ದೇವೆ. ದೆಹಲಿಯಲ್ಲಿ ಬಸ್‌ಗಳಿಗೆ ಉಬರ್ ರೈಡ್‌ಗಳ ಅನುಕೂಲತೆಯನ್ನು ಅಧಿಕೃತವಾಗಿ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ" ಎಂದು ಉಬರ್ ಷಟಲ್ ಇಂಡಿಯಾ ಮುಖ್ಯಸ್ಥ ಅಮಿತ್ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Uber ಅಪ್ಲಿಕೇಶನ್‌ನಲ್ಲಿ ''Uber Shuttle'' ಆಯ್ಕೆಯನ್ನು ಆರಿಸುವ ಮೂಲಕ ಗ್ರಾಹಕರು ತಮ್ಮ ಆದ್ಯತೆಯ ಮಾರ್ಗದಲ್ಲಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ದೈನಂದಿನ ಪ್ರಯಾಣದ ಅಗತ್ಯಗಳಿಗೆ ಅನುಗುಣವಾಗಿ ಬಸ್ ಸೇವೆಯಾದ ಉಬರ್ ಷಟಲ್‌ನ ಔಪಚಾರಿಕ ಸಂಚಾರದ ಪ್ರಾಯೋಗಿಕ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ, ಇದನ್ನು ಆರಂಭದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಪರೀಕ್ಷಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರು ಒಂದು ವಾರದ ಮುಂಚಿತವಾಗಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಲು ಸಾಧ್ಯವಾಗುತ್ತದೆ, ಬಸ್‌ನ ಲೈವ್ ಸ್ಥಳ ಮತ್ತು ಮಾರ್ಗವನ್ನು ಟ್ರ್ಯಾಕ್ ಮಾಡಬಹುದು. ಅಲ್ಲದೆ, ಅದರ ಆಗಮನದ ನಿರೀಕ್ಷಿತ ಸಮಯವನ್ನು (ಇಟಿಎ) ವೀಕ್ಷಿಸಬಹುದು. ಇದೆಲ್ಲವನ್ನೂ ಉಬರ್ ಅಪ್ಲಿಕೇಶನ್ ಮೂಲಕ ಮಾಡಬಹದು. ಪ್ರತಿ ಶಟಲ್ ವಾಹನವು 19ರಿಂದ 50 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಉಬರ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಥಳೀಯ ಫ್ಲೀಟ್ ಪಾಲುದಾರರಿಂದ ಈ ಸೇವೆಯನ್ನು ನಿರ್ವಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.