ಮಾರ್ಚ್ 31ಕ್ಕೆ ಕೊನೆಗೊಂಡ 2021-22ರ ಆರ್ಥಿಕ ವರ್ಷದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಯ ಮೂಲಕ 27.07 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗಿದೆ. ಕಳೆದ ಆರ್ಥಿಕ ಸಾಲಿಗಿಂತ ಶೇ. 34 ಅಧಿಕವಾಗಿದೆ. ಬಜೆಟ್ನಲ್ಲಿ ಅಂದಾಜಿಸಿದ್ದ 22.17 ಲಕ್ಷ ಕೋಟಿ ರೂ. ನಿರೀಕ್ಷೆಗಿಂತಲೂ 5.10 ಲಕ್ಷ ಕೋಟಿ ರೂ. ಹೆಚ್ಚು ತೆರಿಗೆ ಆಕರವಾಗಿದೆ. 2020-21ರಲ್ಲಿ 20.27 ಲಕ್ಷ ಕೋಟಿ ರೂ. ಸಂಗ್ರಹ ಆಗಿತ್ತ್ತು ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ನೇರ ತೆರಿಗೆ
- ನೇರ ತೆರಿಗೆಯಲ್ಲಿ 14.10 ಲಕ್ಷ ಕೋಟಿ ರೂ. ಆಕರ. ಈ ಬಾಬ್ತಿನಲ್ಲಿ ಬಜೆಟ್ ಅಂದಾಜಿಗಿಂತ 3.02 ಲಕ್ಷ ಕೋಟಿ ರೂ. ಅಧಿಕ ತೆರಿಗೆ ಸಂಗ್ರಹ.
- ಕಾರ್ಪೋರೇಟ್ ತೆರಿಗೆಯಲ್ಲಿ ಶೇ. 56.1 ಹೆಚ್ಚಳ, 8.58 ಲಕ್ಷ ಕೋಟಿ ರೂ. ತೆರಿಗೆ ಶೇಖರ.
- ವೈಯಕ್ತಿಕ ಆದಾಯ ತೆರಿಗೆಯಲ್ಲಿ ಶೇ. 43 ಏರಿಕೆಯಿಂದ 7.49 ಲಕ್ಷ ಕೋಟಿ ರೂ. ಸಂಗ್ರಹ.
- ನೇರ ತೆರಿಗೆಯಲ್ಲಿ ಶೇ. 49 ಪ್ರಗತಿ
ಪರೋಕ್ಷ ತೆರಿಗೆ
- 12.90 ಲಕ್ಷ ಕೋಟಿ ರೂ.ಪರೋಕ್ಷ ತೆರಿಗೆ ಶೇಖರ.
- ಸೀಮಾಸುಂಕದಲ್ಲಿ ಶೇ. 48 ಏರಿಕೆಯಾಗಿ 1.99 ಲಕ್ಷ ಕೋಟಿ ರೂ. ಶೇಖರ.
- ಸಿಜಿಎಸ್ಟಿ ಮತ್ತು ಸೆಸ್ನಲ್ಲಿ ಶೇ. 30 ಹೆಚ್ಚಳ, 6.95 ಲಕ್ಷ ಕೋಟಿ ರೂ. ಸಂಗ್ರಹ.
- ಅಬಕಾರಿ ಸುಂಕದಲ್ಲಿ ಶೇ. 0.2 ಇಳಿಕೆ 3.90 ಲಕ್ಷ ರೂ. ಆಕರ.
- ಪರೋಕ್ಷ ಸುಂಕದಲ್ಲಿ ಶೇ. 20ರಷ್ಟು ಏರಿಕೆ
- 2021-22ರ ಜಿಡಿಪಿ ಅನುಪಾತದಲ್ಲಿ ಶೇ. 11.7 ಹೆಚ್ಚಳ. 23 ವರ್ಷದ ನಂತರ ಜಿಡಿಪಿ ಅನುಪಾತದಲ್ಲಿ ಈ ಏರಿಕೆ ಕಂಡಿದೆ.
- ಹೆಚ್ಚುವರಿಯಾಗಿ ಪಾವತಿಯಾಗಿದ್ದ 2.24 ಲಕ್ಷ ಕೋಟಿ ರೂ. ಆದಾಯ ತೆರಿಗೆ 2.43 ಕೋಟಿ ಮಂದಿಗೆ ಮರುಪಾವತಿ.