ನ್ಯೂಸ್

ಅಸ್ಸಾಂನಲ್ಲಿ ಟಾಟಾ 40 ಸಾವಿರ ಕೋಟಿ ರೂ. ಹೂಡಿಕೆ

ನವದೆಹಲಿ: ಅಸ್ಸಾಂನಲ್ಲಿ ಚಿಪ್​ ಸಂಸ್ಕರಣೆ ಸ್ಥಾವರವೊಂದನ್ನು ಸ್ಥಾಪಿಸಲು ಟಾಟಾ ಸಮೂಹ ನಿರ್ಧರಿಸಿದ್ದು ಅದಕ್ಕಾಗಿ 40,000 ಕೋಟಿ ರೂಪಾಯಿ ಬಂಡವಾಳ ಹೂಡುವ ಪ್ರಸ್ತಾಪನೆಯನ್ನು ಸಲ್ಲಿಸಿದೆ.

ತಮಿಳುನಾಡಿನ ಹೊಸೂರಿನಲ್ಲಿ ಐಫೋನ್​ ತಯಾರಿಕೆ ಕಾರ್ಖಾನೆ ಸ್ಥಾಪಿಸುವ ಕುರಿತ ಟಾಟಾ ನಿರ್ಧಾರ ಹೊರಬಿದ್ದ ಮರುದಿನವೇ ಚಿಪ್​ ಸ್ಥಾವರದ ಸುದ್ದಿ ಪ್ರಕಟವಾಗಿದೆ.

ಅಸ್ಸಾಂ ರಾಜಧಾನಿ ಗುವಾಹಟಿಯಿಂದ 55 ಕಿಮೀ ದೂರದಲ್ಲಿರುವ ಜಗಿರೋಡ್​ನಲ್ಲಿ ಇಲೆಕ್ಟ್ರಾನಿಕ್​ ಕೇಂದ್ರವೊಂದನ್ನು ಸ್ಥಾಪಿಸುವ ಬಗ್ಗೆ ಟಾಟಾ ಇಲೆಕ್ಟ್ರಾನಿಕ್ಸ್​ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಹೇಳಿದ್ದಾರೆ. ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ಕಂಪನಿ, ಅಂತಿಮ ಅನುಮತಿಗಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದೆ ಎಂದು ಶರ್ಮಾ ತಿಳಿಸಿದ್ದಾರೆ.