ನ್ಯೂಸ್

ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ ಉದಯನಿಧಿಗೆ ಸಚಿವ ಸ್ಥಾನ: ನಾಳೆ ಪ್ರಮಾಣವಚನ ಸ್ವೀಕಾರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ರ ಪುತ್ರ ಉದಯನಿಧಿ ಅವರು ನಾಳೆ(ಡಿ.14) ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉದಯನಿದಿ ಅವರನ್ನು ಅಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸುವಂತೆ ತಮಿಳುನಾಡು ರಾಜ್ಯಪಾಲ ಆರ್​.ಎನ್​.ರವಿ ಅವರಿಗೆ ಸಿಎಂ ಸ್ಟಾಲಿನ್​ ಶಿಫಾರಸು ಮಾಡಿದ್ದಾರೆ. ಈ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ನಾಳೆ ಬೆಳಗ್ಗೆ 9.30ಕ್ಕೆ ರಾಜಭವನದ ದರ್ಬಾರ್​ ಹಾಲ್​ನಲ್ಲಿ ಪ್ರಮಾನವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಮೊದಲ ಬಾರಿಗೆ ಸಚಿವರಾಗುತ್ತಿರುವ 45 ವರ್ಷದ ಉದಯನಿಧಿಗೆ ಕ್ರೀಡಾ ಖಾತೆ ಸಿಗುವ ಸಾಧ್ಯತೆ ಇದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಅಜ್ಜ ಕರುಣಾನಿಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಚೆಪಾಕ್​ ತಿರುವಲ್ಲಿಕೇಣಿ ಕ್ಷೇತ್ರದಿಂದ ಶಾಸಕರಾಗಿ ಕಳೆದ ವರ್ಷ ಉದಯನಿಧಿ ಆಯ್ಕೆಯಾಗಿದ್ದಾರೆ.