Tamannaah Bhatia: ತೆಲುಗು, ತಮಿಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಮಿಂಚಿರುವ 'ಮಿಲ್ಕಿ ಬ್ಯೂಟಿ', ನಟಿ ತಮನ್ನಾ ಭಾಟಿಯಾ ಸದ್ಯ ತಮ್ಮ ಬಹುನಿರೀಕ್ಷಿತ 'ಒಡೆಲಾ-2' ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಸಿಕರ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಈ ಚಿತ್ರವು ಹಿಂದಿನ ಬ್ಲಾಕ್ಬಸ್ಟರ್ ಹಿಟ್ 'ಒಡೆಲಾ ರೈಲ್ವೇ ಸ್ಟೇಷನ್' ಚಿತ್ರದ ಸೀಕ್ವೆಲ್ ಎನ್ನಲಾಗಿದೆ.
ಇದನ್ನೂ ಓದಿ: 6, 6, 4… ಬುಮ್ರಾಗೆ ಕಾಡಿದ ‘ಕಿಂಗ್’ ಕೊಹ್ಲಿ ಆಕರ್ಷಕ ಅರ್ಧ ಶತಕ! ಮೊಳಗಿದ ಫ್ಯಾನ್ಸ್ ಕೂಗು | RCB vs MI
ಅಶೋಕ್ ತೇಜ ನಿರ್ದೇಶಿಸಿರುವ ಥ್ರಿಲ್ಲರ್ ಜಾನರ್ನ ಚಿತ್ರವು ಇದೇ ತಿಂಗಳ 17ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಏಪ್ರಿಲ್ 8ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಗಳು ಸಹ ಹೆಚ್ಚಾಗಿವೆ. ನಟಿಯ ಮುಂಬರುವ ಸಿನಿಮಾಗಳ ಕುರಿತು ಹೆಚ್ಚು ಗಮನ ಕೊಡದ ಸಿನಿಪ್ರಿಯರು, ತಮನ್ನಾ ಮತ್ತು ಪ್ರಿಯಕರ ವಿಜಯ್ ವರ್ಮ ಅವರ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವದಂತಿಗಳನ್ನು ಹಬ್ಬಿಸಿದ್ದರು. ಈ ಬಗ್ಗೆ ತಮನ್ನಾ ಅವರ ಪ್ರತಿಕ್ರಿಯೆ ಕೂಡ ಬಯಸಿದ್ದರು. ಆದ್ರೆ, ಇದ್ಯಾವುದಕ್ಕೂ ಕಿಮ್ಮತ್ತು ಕೊಡದ ನಟಿ, ಇದೀಗ ಮತ್ತೊಂದು ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾಗಳ ಹೊರತಾಗಿ, ಪ್ರಸ್ತುತ ಮುಂಬೈನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ತಮನ್ನಾ, ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಅವರ ಪುತ್ರಿ ರಶಾ ಥಡಾನಿ ಅವರೊಂದಿಗೆ ಬಹಳ ಆತ್ಮೀಯರಾಗಿದ್ದಾರೆ. ಇಷ್ಟೇ ಅಲ್ಲ, ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧ ಕೂಡ ಇದ್ದು, ಇದು ಹಲವರ ಟೀಕೆಗೆ ಗುರಿಯಾಗಿದೆ. ಇಬ್ಬರೂ ಆಗಾಗ್ಗೆ ಬಿಟೌನ್ ಕೆಲವು ಪಾರ್ಟಿಗಳಲ್ಲಿ ಒಟ್ಟಿಗೆ ಸೇರುತ್ತಾರೆ. ಇವರ ಈ ಸ್ನೇಹವೇ ಸದ್ಯ ಜಾಲತಾಣಗಳಲ್ಲಿ ನೆಟ್ಟಿಗರ ಹಾಟ್ ಟಾಪಿಕ್ ಆಗಿದೆ.
ರಶಾ ಥಡಾನಿ ಮತ್ತು ತಮನ್ನಾ ನಡುವೆ ಸುಮಾರು 15 ವರ್ಷಗಳ ವಯಸ್ಸಿನ ಅಂತರವಿದೆ. ಹೀಗಿರುವಾಗ ಇವರ ಮಧ್ಯೆ ಅಂತಹ ಸ್ನೇಹವೇನು? ಎಂದು ನೆಟ್ಟಿಗರು ಪ್ರಶ್ನಿಸಿ, ಟೀಕಿಸಿದ್ದರು. ಈ ಕುರಿತಾಗಿ ಇತ್ತೀಚೆಗೆ ನಡೆದ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ತಮನ್ನಾ, ಇದಕ್ಕೆ ಕಡೆಗೂ ಪ್ರತಿಕ್ರಿಯಿಸಿದ್ದಾರೆ. "ಹೌದು, ನಮ್ಮಿಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದೆ. ಆದರೆ, ಇಲ್ಲಿ ನಮಗೆ ವಯಸ್ಸಿನ ಸಮಸ್ಯೆಯೇ ಇಲ್ಲ. ಕಾರಣ, ನಮ್ಮ ಸಂಬಂಧದಲ್ಲಿ ಕೊಡಲು ಮತ್ತು ತೆಗೆದುಕೊಳ್ಳಲು ಏನೂ ಇಲ್ಲ. ನಾವು ಇಷ್ಟಪಡುವ ಜನರೊಂದಿಗೆ ಸ್ವಲ್ಪ ಸಮಯ ಕಳೆಯುತ್ತೇವೆ, ಆನಂದಿಸುತ್ತೇವೆ" ಎಂದು ತಮನ್ನಾ ಹೇಳಿದ್ದಾರೆ,(ಏಜೆನ್ಸೀಸ್).