ನ್ಯೂಸ್

ಜೆಡಿಎಸ್‌ಗೆ ಸಿದ್ದಾಂತವಿಲ್ಲ, ಇವರಿಗೆ ಮಾತ್ರ ಸಿದ್ದಾಂತವಿದ್ಯಾ?; ಸಿಎಂ ಹೇಳಿಕೆಗೆ ಎಚ್​ಡಿಕೆ ತಿರುಗೇಟು

ಬೆಂಗಳೂರು: ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ತನ್ನ ಸಿದ್ಧಾಂತವನ್ನು ಬಲಿ ಕೊಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಇದೀಗ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ: 'ಜೆಡಿಎಸ್​​ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯಾತೀತತೆ ಏನಾಯಿತು? ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಅಂತಲೇ ಅರ್ಥ' ಎಂದು ಹೇಳಿದರು. ಇದಕ್ಕೆ ಇದೀಗ ತಿರುಗೇಟು ನೀಡಿರುವ ಎಚ್​​.ಡಿ. ಕುಮಾರಸ್ವಾಮಿ, "ಅವರಿಗೆ ಯಾವ ಸಿದ್ದಾಂತವಿದೆ, ಪಕ್ಕದಲ್ಲೇ ಕೂರಿಸಿಕೊಂಡಿದ್ದಾರಲ್ಲ ನಿತೀಶ್ ಕುಮಾರ್, ಅಬ್ದುಲ್ಲಾ ಇವರಿಗೆ ಯಾವ ಸಿದ್ದಾಂತವಿದೆ. ಕಾಂಗ್ರೆಸ್ ಜತೆ ಯಾವಾಗ ಇದ್ದರು, ಬಿಜೆಪಿಯೊಟ್ಟಿಗೆ ಎಂದು ಸರ್ಕಾರ ರಚನೆ ಮಾಡಿದರು ಎಂಬುದಕ್ಕೆ ಉದಾಹರಣೆಗಳಿದೆ" ಎಂದು ಹೇಳಿದರು.

"ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲ. ಇವರಿಗೆ ಮಾತ್ರ ಸಿದ್ದಾಂತವಿದ್ಯಾ? 2008-2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿಗೆ ಹೋಗಿದ್ದು ಯಾರು, ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ಲವೇ? ಅವರನ್ನೇ ಕೇಳಿ, ಈ ಬೂಟಾಟಿಕೆಗಳು ಬೇಡ" ಎಂದು ಹೇಳುವ ಮುಖೇನ ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.