ನ್ಯೂಸ್

ಸದನದಲ್ಲಿ ರಾಮಾಯಣ ಚರ್ಚೆ; ತೇಜಸ್ವಿನಿ-ಸತೀಶ್ ಜಾರಕಿಹೊಳಿ ನಡುವೆ ಮಾತಿನ ಸಮರ!

ಮೋಹನ್​ ಶೆಟ್ಟಿ

ಬೆಂಗಳೂರು: ವಿಧಾನ ಪರಿಷತ್​ ಕಲಾಪದಲ್ಲಿ ರಾಮಯಾಣ ಚರ್ಚೆ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಎಂಎಲ್​ಸಿ ತೇಜಸ್ವಿನಿ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ.

ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರು ಮತ್ತು ಸಚಿವರ ನಡುವೆ ರಾಮಾಯಣ ಚರ್ಚೆ ಭುಗಿಲೆದ್ದಿದ್ದು, ಬಿಜೆಪಿ ಎಂಎಲ್​​ಸಿ ತೇಜಸ್ವಿನಿ ರಮೇಶ್ ಸವಾಲ್​​ಗೆ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. "ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ರಾಮಾಯಣ ಕುರಿತು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ ತೇಜಸ್ವಿನಿ, ಕುವೆಂಪು ರಾಮಾಯಣ, ವ್ಯಾಸರ ರಾಮಾಯಣ, ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಚರ್ಚೆಯಾಗಬೇಕು" ಎಂದು ಹೇಳಿದರು.

ತೇಜಸ್ವಿನಿ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, "ರಾಮಾಯಣದ ವಿಚಾರ, ಏಕಲವ್ಯನ ಬೆರಳು ಕತ್ತರಿಸಿದ್ದು ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಬೇಕು. ಆಗ ಮಾತ್ರವೇ ಪರಿಪೂರ್ಣ ಚರ್ಚೆ ನಡೆಯಲು ಸಾಧ್ಯ" ಎಂದು ಹೇಳುವ ಮೂಲಕ ತೇಜಸ್ವಿನಿ ಅವರ ಹೇಳಿಕೆಗೆ ಸದನದಲ್ಲಿ ತಿರುಗೇಟು ನೀಡಿದ್ದಾರೆ.