US-Bangla flight: ಢಾಕಾ ವಿಮಾನ ನಿಲ್ದಾಣದಲ್ಲಿ ಟೇಕ್‌ಆಫ್ ವೇಳೆ ತಾಂತ್ರಿಕ ಎಚ್ಚರಿಕೆ ಕಾಣಿಸಿಕೊಂಡ ಹಿನ್ನೆಲೆ ಯುಎಸ್-ಬಾಂಗ್ಲಾ ಏರ್‌ಲೈನ್ಸ್ ವಿಮಾನವನ್ನು ಪೈಲಟ್ ತಕ್ಷಣವೇ ನಿಲ್ಲಿಸಿದ್ದಾರೆ. ಘಟನೆಯ ಬಳಿಕ ವಿಮಾನದ ಚಕ್ರಗಳಿಂದ ಹೊಗೆ ಕಾಣಿಸಿಕೊಂಡಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನದಲ್ಲಿದ್ದ 420 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಯುಎಸ್-ಬಾಂಗ್ಲಾ ಏರ್‌ಲೈನ್ಸ್‌ಗೆ ಸೇರಿದ ಏರ್‌ಬಸ್ A330-300 (BS-361) ವಿಮಾನವು ಢಾಕಾದಿಂದ ಸೌದಿ ಅರೇಬಿಯಾದ ಜೆದ್ದಾಗೆ ತೆರಳಲು ಸಿದ್ಧವಾಗಿತ್ತು. ಟೇಕ್‌ಆಫ್ ವೇಳೆ ಕಾಕ್‌ಪಿಟ್‌ನಲ್ಲಿ ತಾಂತ್ರಿಕ ಎಚ್ಚರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತಕ್ಷಣವೇ ಹಾರಾಟವನ್ನು ರದ್ದುಗೊಳಿಸಿ ವಿಮಾನವನ್ನು ನಿಲ್ಲಿಸಿದ್ದಾರೆ.
ವಿಮಾನ ಟೇಕ್‌ಆಫ್‌ಗೆ ಸಿದ್ಧವಾಗಿದ್ದ ವೇಳೆ ಕಾಕ್‌ಪಿಟ್‌ನಲ್ಲಿ ತಾಂತ್ರಿಕ ಸೂಚನೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಪೈಲಟ್ ಹಾರಾಟವನ್ನು ರದ್ದುಗೊಳಿಸಿ ವಿಮಾನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಬ್ರೇಕ್‌ಗಳನ್ನು ಬಲವಾಗಿ ಬಳಸಿದ್ದರಿಂದ ವಿಮಾನದ ಚಕ್ರಗಳು ಹೆಚ್ಚು ಬಿಸಿಯಾಗಿದ್ದು, ಅವುಗಳಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ.
ವಿಮಾನ ನಿಂತ ಬಳಿಕ ಚಕ್ರಗಳ ಬಳಿ ಹೊಗೆ ಕಾಣಿಸಿಕೊಂಡಿದ್ದರಿಂದ ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಚಕ್ರಗಳನ್ನು ತಂಪಾಗಿಸಲು ನೀರು ಸಿಂಪಡಿಸಲಾಗಿದೆ. ವಿಮಾನದ ಎಂಜಿನ್ ಅಥವಾ ಚಕ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಏರ್‌ಲೈನ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ವಿಮಾನದಲ್ಲಿದ್ದ ಎಲ್ಲಾ 420 ಪ್ರಯಾಣಿಕರನ್ನು ತುರ್ತು ನಿರ್ಗಮನ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸ್ಥಳಾಂತರದ ವೇಳೆ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಲು ಯುಎಸ್-ಬಾಂಗ್ಲಾ ಏರ್‌ಲೈನ್ಸ್ ಸಂಸ್ಥೆ ಬದಲಿ ವಿಮಾನದ ವ್ಯವಸ್ಥೆ ಮಾಡಿದೆ. ಟೇಕ್‌ಆಫ್ ವೇಳೆ ಕಾಣಿಸಿಕೊಂಡ ತಾಂತ್ರಿಕ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪೈಲಟ್ ತಕ್ಷಣ ವಿಮಾನವನ್ನು ನಿಲ್ಲಿಸಿದ್ದರಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದೆ. (ಏಜೆನ್ಸೀಸ್)