ನ್ಯೂಸ್

'ಅದನ್ನು ಒಪ್ಪಿಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ': ಟಬು ಹೀಗೆನ್ನಲು ಕಾರಣವಿದೆ ನೋಡಿ..

ಮುಂಬೈ: ಅದೊಂದು ಚಿತ್ರ ಒಪ್ಪಿಕೊಂಡು ತುಂಬಾ ನೋವು ಅನುಭವಿಸಿದೆ ಎಂದು ನಟಿ ಟಬು ಹೇಳಿದ್ದಾರೆ.

ಪ್ರಸ್ತುತ ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಟಬು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಸಿನಿಮಾ ಜೀವನ ಹೇಗೆ ಆರಂಭವಾಯಿತು ಎಂದು ಹೇಳಿದರು. ಅಲ್ಲದೆ, ಹಲವು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಪ್ರಾಜೆಕ್ಟ್ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದಿದ್ದಾರೆ. ಅದೂ ಅಲ್ಲದೆ ಪ್ರಾಜೆಕ್ಟ್ ಯಾಕೆ ಒಪ್ಪಿಕೊಂಡೆ ಎಂಬ ಭಾವನೆ ಅವರಲ್ಲಿತ್ತು.

"ನಟಿ ಶಬಾನಾ ಅಜ್ಮಿ ನಮ್ಮ ಸಂಬಂಧಿ. ಒಮ್ಮೆ ಅವರ ಮನೆಗೆ ಹೋದಾಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ನನ್ನನ್ನು ನೋಡಿದರು. ತಾನು 'ದುಷ್ಮಣಿ' ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನನ್ನನ್ನು ನಟಿಸಬೇಕು ಎಂದು ಕೇಳಿದರು. ಆದರೆ ನಾನು ಆಗ 10ನೇ ತರಗತಿಯಲ್ಲಿ ಓದುತ್ತಿದ್ದೆ. ನಾನಿನ್ನೂ ಓದಬೇಕು, ಹೀಗಾಗಿ ಸಿನಿಮಾ ಮಾಡಲು ಬರುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ.

ಆದರೆ ತುಂಬಾ ಸಾರಿ ಅವರು ಕೇಳಿಕೊಂಡ ನಂತರ ನಾನು ಪರೀಕ್ಷೆ ಬರೆದ ಬಳಿಕ ಒಪ್ಪಿಕೊಂಡೆ. ಪ್ರಾಜೆಕ್ಟ್​ಗೆ ಸಹಿ ಸಹ ಮಾಡಿದೆ. ಆದರೆ ಅದೇನಾಯಿತೋ ಶೂಟಿಂಗ್ ಆರಂಭದಲ್ಲೇ ನಿಂತುಹೋಯಿತು.

ಹಲವು ವರ್ಷಗಳ ಬಳಿಕ ಶೇಖರ್​ ಮತ್ತೆ ಭೇಟಿಯಾದರು. ಪ್ರೇಮ್​ ಚಿತ್ರ ಮಾಡುತ್ತಿದ್ದು, ಅದರಲ್ಲಿ ನಟಿಸಲು ಕೇಳಿದರು. ನಾನು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುತ್ತಿರುವುದಾಗಿ ಹೇಳಿದೆ. ಆದರೆ ಅವರು ತುಂಬಾ ಒತ್ತಾಯ ಮಾಡಿದಾಗ ನಾನು ಆ ಪ್ರಾಜೆಕ್ಟ್ ಗೆ ಯಸ್ ಎಂದು ಹೇಳಿದೆ. ಆದರೆ ಶೂಟಿಂಗ್​ ಪ್ರಾರಂಭವಾಗುತ್ತಿದ್ದಂತೆ ಶೇಖರ್​ ಆ ಯೋಜನೆಯಿಂದ ಹೊರಬಿದ್ದರು. ಬಳಿಕ ಆ ಚಿತ್ರ 5ವರ್ಷ ಚಿತ್ರೀಕರಣವಾಗಿದ್ದು, ಇದರಿಂದ ಆ ಚಿತ್ರ ಒಪ್ಪಿಕೊಂಡಿದ್ದಕ್ಕೆ ತುಂಬಾ ನೋವು ಅನುಭವಿಸಿದೆ ಎಂದು ಹೇಳಿದರು.

'ಮಾಸುಮ್', 'ಮಿಸ್ಟರ್ ಇಂಡಿಯಾ' ‘ಎಲಿಜಬೆತ್’ ಮುಂತಾದ ಚಿತ್ರಗಳನ್ನು ಶೇಖರ್ ನಿರ್ದೇಶಿಸಿದ್ದಾರೆ. ಅದೇ ರೀತಿ ಟಬು ಈಗಲೂ ಬಾಲಿವುಡ್‌ನಲ್ಲಿ ಸಾಲು ಸಾಲು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 'ಕ್ರೂ' ಚಿತ್ರದಲ್ಲಿ ನಟಿಸಿದ್ದರು.