ನ್ಯೂಸ್

Taapsee: ಟರ್ಕಿ ಏರ್​ಲೈನ್ಸ್​ 24 ಗಂಟೆ ತಡ..ನಟಿ ತಾಪ್ಸಿ ಬೇಸರ

ನವದೆಹಲಿ: ನಟಿ ತಾಪ್ಸಿ(Taapsee) ತಮಗೆ ನಡೆದ ಕಹಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 24 ಗಂಟೆ ತಡವಾಗಿ ಬಂದ ವಿಮಾನದಲ್ಲಿ ಕಸ್ಟಮರ್ ಕೇರ್ ಸೇವೆ ಸಹ ಲಭ್ಯವಿರಲಿಲ್ಲ ಎಂದು ಟರ್ಕಿ ಏರ್ ಲೈನ್ಸ್ ಕುರಿತು ಅಸಹನೆ ವ್ಯಕ್ತಪಡಿಸಿದ್ದಾರೆ.

ಏರ್‌ಲೈನ್ಸ್ 24 ಗಂಟೆ ವಿಳಂಬವಾಗಿತ್ತು. ಇದು ಪ್ರಯಾಣಿಕರ ಸಮಸ್ಯೆ ಅಲ್ಲ, ವಿಮಾನ ವಿಳಂಬದ ಬಗ್ಗೆ ಯಾವುದೇ ಪೂರ್ವ ಮಾಹಿತಿ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ಇದೀಗ ವೈರಲ್ ಆಗಿದೆ.

ಆದರೆ, ಈ ಅನುಭವ ತನಗೆ ಯಾವಾಗ ಸಂಭವಿಸಿತು ಎಂಬುದನ್ನು ಈ ನಟಿ ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಜನಪ್ರಿಯ ನಟಿ ಶ್ರುತಿ ಹಾಸನ್ ವಿಮಾನಯಾನ ಸಂಸ್ಥೆ ಇಂಡಿಗೋ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಮಾನ ವಿಳಂಬವಾದ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಬೇಸರ ಹೊರಹಾಕಿದ್ದರು.

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತನಗೆ ಮತ್ತು ತನ್ನ ಸಹ ಪ್ರಯಾಣಿಕರಿಗೆ ಅನಾನುಕೂಲವಾಗಿದೆ ಎಂದು ದೂರಿದ್ದರು. ಈ ಬಗ್ಗೆ ಇಂಡಿಗೋ ಪ್ರತಿಕ್ರಿಯೆ ನೀಡಿ, ವಿಮಾನ ವಿಳಂಬಕ್ಕೆ ಕಾರಣ ವಿವರಿಸಿದ್ದರು.