ನವದೆಹಲಿ: ಆಹಾರವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕೆಲಸದಲ್ಲಿ ತೊಡಗಿರುವ ಸ್ವಿಗ್ಗಿ ಮತ್ತು ಜೊಮಾಟೋ ಕಂಪನಿಗಳನ್ನು ವಿಲೀನಗೊಳಿಸಿ, ಒಂದು ಕಂಪನಿಯನ್ನಾಗಿಸುವ ಪ್ರಯತ್ನಗಳು ಆರಂಭವಾಗಿವೆ. ಹೂಡಿಕೆದಾರರ ಮಟ್ಟದಲ್ಲಿ ಈ ಕುರಿತು ಚರ್ಚೆಗಳು ಆರಂಭವಾಗಿರುವುದಾಗಿ ಹೇಳಲಾಗುತ್ತಿದೆ.
ಕೋವಿಡ್-19 ಲಾಕ್ಡೌನ್ ಜಾರಿಗೆ ಬರುವ ಮುನ್ನವೇ ಉಭಯ ಸಂಸ್ಥೆಗಳು ಭಾರಿ ನಷ್ಟದಲ್ಲಿದ್ದವು. ಲಾಕ್ಡೌನ್ ಜಾರಿಯಾದ ಬಳಿಕವಂತೂ ನಷ್ಟದ ಬಾಬ್ತು ಏರುತ್ತಲೇ ಹೋಯಿತು. ಅಮೆಜಾನ್ ಕೂಡ ಈ ಕ್ಷೇತ್ರವನ್ನು ಪ್ರವೇಶಿಸಿದ ನಂತರದಲ್ಲಿ ಉಭಯ ಸಂಸ್ಥೆಗಳಲ್ಲಿ ಹಣತೊಡಗಿಸಿರುವ ಚೀನಿ ಹೂಡಿಕೆದಾರರಲ್ಲಿ ನಡುಕ ಆರಂಭವಾಯಿತು ಎನ್ನಲಾಗಿದೆ.
ಸದ್ಯ ಮಾತುಕತೆಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಸ್ವಿಗ್ಗಿ ಅಥವಾ ಜೊಮಾಟೋದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಸ್ವಿಗ್ಗಿ ಮಾತ್ರ ಇದೊಂದು ಊಹಾಪೋಹದ ಸುದ್ದಿ ಎಂದು ತಳ್ಳಿಹಾಕಲು ಯತ್ನಿಸಿದೆ ಎನ್ನಲಾಗಿದೆ.