More

    ಮೋದಿ- ಅಮಿತ್ ಷಾ ಮಾತುಕತೆ; ಇನ್ನೆರಡು ವಾರ ಲಾಕ್‌ಡೌನ್ ವಿಸ್ತರಣೆ ನಿರೀಕ್ಷೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಇಲ್ಲಿನ ನಿವಾಸದಲ್ಲಿ ಗೃಹ ಸಚಿವ ಅಮಿತ್ ಷಾ ಶುಕ್ರವಾರ ಭೇಟಿ ಮಾಡಿ, ಲಾಕ್‌ಡೌನ್ ವಿಸ್ತರಣೆ ಕುರಿತು ನಿನ್ನೆ ತಾವು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ಮಾತುಕತೆಯ ವಿವರಗಳನ್ನು ನೀಡಿದರು.

    ಕರೊನಾಕ್ಕೆ ಸಂಬಂಧಿಸಿದಂತೆ ದೇಶದ ಯಾವ್ಯಾವ ರಾಜ್ಯದಲ್ಲಿ ಏನೇನು ಪರಿಸ್ಥಿತಿ ಇದೆ, ಎಲ್ಲೆಲ್ಲಿ ಲಾಕ್‌ಡೌನ್ ವಿಸ್ತರಿಸಬೇಕು, ಯಾವ್ಯಾವುದಕ್ಕೆ ವಿನಾಯಿತಿ ವಿಸ್ತರಿಸಬೇಕು ಎಂಬುದರ ಕುರಿತು ಇಬ್ಬರೂ ನಾಯಕರು ಸುದೀರ್ಘ ಮಾತುಕತೆ ನಡೆಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮಾಲ್‌ಗಳನ್ನು ತೆರೆಯುವ ಕುರಿತು ಶೀಘ್ರವೇ ಕೇಂದ್ರದ ನಿರ್ಧಾರ

    ನಾಲ್ಕನೇ ಹಂತದ ಲಾಕ್‌ಡೌನ್ ಇದೇ 31ಕ್ಕೆ ಅಂತ್ಯವಾಗಲಿದೆ. ಜೂನ್ 1ರಿಂದ ಐದನೇ ಹಂತದ ಲಾಕ್‌ಡೌನ್ ಆರಂಭಿಸಬೇಕಾಗಿದೆ. ಅದನ್ನು ಎರಡು ವಾರಗಳ ಕಾಲ ನಿಗದಿಪಡಿಸಬೇಕೆಂಬ ಅಭಿಪ್ರಾಯ ಮಾತುಕತೆ ವೇಳೆ ಹೊರಹೊಮ್ಮಿತು ಎಂದು ತಿಳಿದುಬಂದಿದೆ.

    ಕೇಂದ್ರದ ನಿರ್ಧಾರಗಳ ಕುರಿತು ಭಾನುವಾರವೇ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯೂ ಇದೆ. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲೇ ಕರೊನಾ ಲಾಕ್‌ಡೌನ್ ಕುರಿತು ಪ್ರಧಾನಿ ಪ್ರಸ್ತಾಪಿಸುತ್ತಾರೆ ಎಂಬ ಬಗ್ಗೆಯೂ ಈ ಹಿಂದೆ ಸುದ್ದಿಯಾಗಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿತ್ತು.

    ಇದನ್ನೂ ಓದಿ: ಅಮ್ಮನಿಗೆ ಅಂದು ಮೋದಿ ಬರೆದ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ…
    ಈ ಮಧ್ಯೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುದ್ದಿಗಾರರ ಜತೆ ಮಾತನಾಡಿ, ನಿನ್ನೆ ಅಮಿತ್ ಷಾ ಅವರೊಂದಿಗಿನ ಮಾತುಕತೆಯಲ್ಲಿ ತಾವು ಲಾಕ್‌ಡೌನ್ ಅನ್ನು ಈಗಿರುವ ಸ್ಥಿತಿಯಲ್ಲೇ ಇನ್ನೂ 15 ದಿನಗಳ ಕಾಲ ವಿಸ್ತರಿಸುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

    ಭಾರತದ ಆ್ಯಪ್​ಗೆ ಹೆದರಿ​ ಚೀನಾದ ಟಿಕ್​ಟಾಕ್​ ರೇಟಿಂಗ್​ ಹೆಚ್ಚಿಸೇಬಿಟ್ಟಿತಲ್ಲ ಗೂಗಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts