ನ್ಯೂಸ್

ತಂಪು ಪಾನೀಯ ಕುಡಿಯುವವರೇ ಎಚ್ಚರ: ಇದರಲ್ಲಿದೆ ಕ್ಯಾನ್ಸರ್​ಕಾರಕ ಅಂಶ​...

ದೆಹಲಿ: ತಂಪು ಪಾನೀಯಗಳನ್ನು ಕುಡಿಯುವ ಜನರಿಗೆ ಶಾಕಿಂಗ್​​ ಸುದ್ದಿಯೊಂದು ಹೊರಬಿದ್ದಿದ್ದು, ವಿಶ್ವದಾದ್ಯಂತ ಬಳಸುವ ಆಸ್ಪರ್ಟೇಮ್ ಅಂಶ​​ ಕ್ಯಾನ್ಸರ್​​​ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಕೋಕಾ-ಕೋಲಾ, ಡಯಟ್ ಸೋಡಾ, ಎಕ್ಸ್‌ಟ್ರಾ ಚೂಯಿಂಗ್ ಗಮ್ ಮತ್ತು ಇತರ ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸಲಾಗುವ ಆಸ್ಪರ್ಟೇಮ್​ ಮನುಷ್ಯರಿಗೆ ಕ್ಯಾನ್ಸರ್ ಉಂಟು ಮಾಡುವ ವಸ್ತು ಎಂದು ಪಟ್ಟಿ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ(WHO) ಕ್ಯಾನ್ಸರ್ ಸಂಶೋಧನಾ ವಿಭಾಗ ಯೋಚಿಸುತ್ತಿದೆ.

ಒಬ್ಬ ವ್ಯಕ್ತಿಯು ಎಷ್ಟು ಉತ್ಪನ್ನವನ್ನು ಸುರಕ್ಷಿತವಾಗಿ ಸೇವಿಸಬಹುದು ಎಂಬುದನ್ನು ಇದು ಗಣನೆಗೆ ತೆಗೆದುಕೊಳ್ಳುವುದಿಲ್ಲವಾದರೂ, ಈ ಸಲಹೆಯು ಜಂಟಿ ಡಬ್ಲೂಎಚ್​​ಒ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಆಹಾರ ಸೇರ್ಪಡೆಗಳ ತಜ್ಞರ ಸಮಿತಿ ಕಡೆಯಿಂದ ಬಂದಿದೆ ಎಂದು ಹೇಳಲಾಗಿದೆ.

 1981ರಲ್ಲಿ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಮಾನವ ಬಳಕೆಗಾಗಿ ಆಸ್ಪರ್ಟೇಮ್​ನ್ನು ಇದರ ಸುರಕ್ಷತೆಯನ್ನು ಐದು ಬಾರಿ ಪರಿಶೀಲಿಸಿದೆ. ಅಲ್ಲದೇ, ಭಾರತ ಸೇರಿದಂತೆ 90ಕ್ಕೂ ಹೆಚ್ಚು ದೇಶಗಳು ಇದರ ಬಳಕೆಯನ್ನು ಅನುಮೋದಿಸಿವೆ.

ಆಸ್ಪರ್ಟೇಮ್ ಯಾವುದೇ ಕ್ಯಾಲೊರಿಗಳನ್ನು ಹೊಂದಿಲ್ಲವಾದರೂ ಸಕ್ಕರೆಗಿಂತ ಸರಿಸುಮಾರು 200 ಪಟ್ಟು ಸಿಹಿಯಾಗಿರುತ್ತದೆ. ಸಿಹಿಕಾರಕವನ್ನು ಹೊಂದಿರುವ ಸುಮಾರು 95 ಪ್ರತಿಶತದಷ್ಟು ಕಾರ್ಬೊನೇಟೆಡ್ ತಂಪು ಪಾನೀಯಗಳು ಆಸ್ಪರ್ಟೇಮ್​ನ್ನು ಬಳಸುತ್ತವೆ.(ಏಜೆನ್ಸೀಸ್​)