ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗಲು ಸ್ವೀಡನ್ನ ರಾಜಕುಮಾರಿ ಸೋಫಿಯಾ ಮುಂದಾಗಿದ್ದಾರೆ. ಆನ್ಲೈನ್ನಲ್ಲಿ ತರಬೇತಿ ಪಡೆದುಕೊಂಡು ಇದೀಗ ಆಸ್ಪತ್ರೆಯಲ್ಲಿ ಕೆಲಸವನ್ನಾರಂಭಿಸಿದ್ದಾರೆ.
ಸ್ಟಾಕ್ಹೋಮ್ ಸೋಫಿಯಾಮೆಂಟ್ ಆಸ್ಪತ್ರೆಯು ಆನ್ಲೈನ್ ತರಬೇತಿ ನೀಡುತ್ತಿದೆ. ವಾರಕ್ಕೆ 80 ಜನರಿಗೆ ಈ ರೀತಿಯ ತರಬೇತಿ ನೀಡಲಾಗುತ್ತಿದ್ದು ಇದರಲ್ಲಿ ತರಬೇತಿ ಪಡೆದುಕೊಂಡಿರುವ ರಾಜಕುಮಾರಿ ಸೋಫಿಯಾ, ಸೇವೆಯನ್ನು ಆರಂಭಿಸಿದ್ದಾರೆ.
ಈ ರೀತಿಯ ತರಬೇತಿ ಪಡೆದಿರುವ ಸಿಬ್ಬಂದಿಗೆ ನೇರವಾಗಿ ಕರೊನಾ ರೋಗಿಗಳ ಚಿಕಿತ್ಸೆಗೆ ಬಿಡದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ನರ್ಸ್ಗಳ ಸಹಾಯಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಕೆಲಸಕ್ಕೆ ಹಾಜರಾದ ಮೊದಲನೇ ದಿನ ಸಮವಸ್ತ್ರದಲ್ಲಿರುವ ಫೋಟೊವನ್ನು ಅವರು ಇನ್ಸ್ಟ್ಟಾಗ್ರಾಮ್ಲ್ಲಿ ಹಾಕಿದ್ದಾರೆ.