ಕಲ್ಕತ್ತ: ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದ ಸ್ವಪನ್ ದಾಸ್ ಗುಪ್ತಾ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಅವರು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಅಥವಾ ಬುಧವಾರ ಅವರ ರಾಜೀನಾಮೆ ಅಂಗೀಕಾರ ಆಗುವ ಸಂಭವವಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸೆಕ್ಸ್ ಡಾಲ್ನೊಂದಿಗಿನ ಮದುವೆ ಮುರಿದುಕೊಂಡ ಬಾಡಿಬಿಲ್ಡರ್! ಈಗ ಇವನಿಗೆ ಜತೆಯಾಗಿರೋದು ಮತ್ತೊಂದು ಸೆಕ್ಸ್ ಡಾಲ್!
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಾರಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಗುಪ್ತಾ ಅವರ ನಡೆಯನ್ನು ಖಂಡಿಸಿ ಟಿಎಂಸಿ ಉಪರಾಷ್ಟ್ರಪತಿಗೆ ದೂರು ಸಲ್ಲಿಸಿತ್ತು. ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯರು ರಾಜಕೀಯ ಪಕ್ಷವೊಂದರಿಂದ ಚುನಾವಣೆಗೆ ಸ್ಪರ್ಧಿಸಬಹುದೇ ಎಂದು ತಕರಾರು ತೆದಿದ್ದರು.
ಇದರ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿರುವ ದಾಸ್ ಗುಪ್ತಾ ಅವರು, ವಿಧಾನಸಭೆ ಚುನಾವಣೆ ಗೆದ್ದು ಶಾಸಕರಾಗುವ ಬಯಕೆಯಲ್ಲಿದ್ದಾರೆ. ಮಾರ್ಚ್ 27 ರಿಂದ 8 ಹಂತಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. (ಏಜೇನ್ಸಿಸ್).