ನ್ಯೂಸ್

ರಕ್ಷಾ ಬಂಧನ 2025 : ಸುಶಾಂತ್​ ಸಿಂಗ್​ ನೆನೆದು ಭಾವುಕ ಪೋಸ್ಟ್ ಮಾಡಿದ ಸಹೋದರಿ ಶ್ವೇತಾ.. Raksha Bandhan

Raksha Bandhan: ರಕ್ಷಾಬಂಧನದ ಸಂದರ್ಭದಲ್ಲಿ, ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ನೆನೆದು ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಾಕಿದ್ದಾರೆ.

ದಿಗಂಗತ ನಟ ತಮ್ಮ ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತಯಲ್ಲಿ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದಿದ್ದಾರೆ. ಕೆಲವೊಮ್ಮೆ ನೀವು ನಿಜವಾಗಿಯೂ ನನ್ನನ್ನು ಬಿಟ್ಟು ಹೋಗಿಲ್ಲ ಎಂದು ಅನಿಸುತ್ತದೆ. ನೀವು ಇನ್ನೂ ಇಲ್ಲೇ ಇದ್ದೀರ, ಮುಸುಕಿನ ಆಚೆ, ಮೌನವಾಗಿ ನೋಡುತ್ತಿದ್ದೀರಿ. ಹಲವು ಬಾರಿ ನೋವುಂಟಾಗಿದೆ. ನಾನು ನಿಜವಾಗಿಯೂ ಎಂದಿಗೂ ನಿಮ್ಮನ್ನು ನೋಡುವುದಿಲ್ಲವೇ? ನಿಮ್ಮ ನಗು ಕೇವಲ ಪ್ರತಿಧ್ವನಿಯಾಗಿ ಉಳಿಯುತ್ತದೆಯೇ? ನಿಮ್ಮ ಧ್ವನಿ, ನಾನು ಗ್ರಹಿಸಲು ಸಾಧ್ಯವಾಗುವುದಿಲ್ಲವೇ ಎಂದಿದ್ದಾರೆ.

ಇನ್ನು ಶ್ವೇತಾ ತಮ್ಮನ ಅಗಲಿಕೆಯ ನೋವನ್ನು ವ್ಯಕ್ತಪಡಿಸಿದ್ದು, ನಿನ್ನನ್ನು ಕಳೆದುಕೊಂಡ ನೋವು ತುಂಬಾ ಕಾಡುತ್ತಿದೆ. ಆ ನೆನಪಿನಲ್ಲಿ ಪದಗಳೇ ಕುಗ್ಗುತ್ತವೆ. ಅದು ನನ್ನೊಳಗೆ ಸದ್ದಿಲ್ಲದೆ ವಾಸಿಸುತ್ತಿವೆ. ಗಟ್ಟಿಯಾಗಿ ಮಾತನಾಡಲು ತುಂಬಾ ಪವಿತ್ರವೆನಿಸುತ್ತದೆ. ಇನ್ನು ಪ್ರತಿ ದಿನ ಕಳೆದಂತೆ, ಅದು ಕಹಿಯಿಂದಲ್ಲ, ಆದರೆ ಸ್ಪಷ್ಟತೆ ಆಳವಾಗುತ್ತಿದೆ. ಇನ್ನು ನಮ್ಮ ಬಾಂಧವ್ಯ ಎಷ್ಟು ದುರ್ಬಲವಾಗಿದೆ ಮತ್ತು ದೈವಿಕತೆ ಮಾತ್ರ ಹೇಗೆ ಆಶ್ರಯ ನೀಡುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ" ಎಂದು ಅವರು ಬರೆದಿದ್ದಾರೆ.

ತನ್ನ ನಂಬಿಕೆಯನ್ನು ಹಿಡಿದಿಟ್ಟುಕೊಳ್ಳಲು ಶ್ವೇತಾ ಒಂದು ದಿನ ಸುಶಾಂತ್​ ಜೊತೆ ಒಂದಾಗುವ ಭರವಸೆ ವ್ಯಕ್ತಪಡಿಸಿದರು. ಮತ್ತೊಂದೆಡೆ, ಕಥೆಗಳನ್ನು ಮೀರಿ, ಸಮಯವನ್ನು ಮೀರಿ, ಆತ್ಮಗಳು ಪರಸ್ಪರ ಗುರುತಿಸುವುದು ಹೆಸರುಗಳ ಮೂಲಕವಲ್ಲ, ಪ್ರೀತಿಯ ಮೌನ ಭಾಷೆಯ ಮೂಲಕ ಅಲ್ಲಿಯವರೆಗೆ, ನಾನು ಇಲ್ಲೇ ಇರುತ್ತೇನೆ. ನನ್ನ ಹೃದಯದಲ್ಲಿ ನಿನಗೆ ರಾಖಿ ಕಟ್ಟುತ್ತೇನೆ, ನೀನು ಎಲ್ಲಿದ್ದರೂ ಸಂತೋಷದಿಂದ ಶಾಂತಿಯಿಂದ ಇರು ಎಂದು ಆಶಯ ವ್ಯಕ್ತಪಡಿಸುತ್ತೇನೆ ಎಂದು ಹೃದಯೀಸ್ಪರ್ಶಿ ಸಂದೇಶವನ್ನು ತಿಳಿಸಿದ್ದಾರೆ. ( ಏಜೆನ್ಸೀಸ್​)