ನವದೆಹಲಿ: ಪತ್ನಿಯ ಕುಟುಂಬಸ್ಥರು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ನಡುವೆಯೇ, ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶವನ್ನು ನಿರ್ಧರಿಸುವ ಬಗ್ಗೆ ಸುಪ್ರೀಂ ಕೋರ್ಟ್ 8 ಅಂಶಗಳ ಮಾರ್ಗಸೂಚಿಯನ್ನು ನೀಡಿದೆ. ಹೈಕೋರ್ಟ್ಗಳು ಸಹಿತ ಎಲ್ಲಾ ಕೆಳ ಹಂತದ ನ್ಯಾಯಾಲಯಗಳು ಈ ಮಾರ್ಗಸೂಚಿಗಳನ್ನು ಅನುಸರಿಸಲು ಸವೋಚ್ಚ ನ್ಯಾಯಾಲಯ ಸಲಹೆ ನೀಡಿದೆ.
ಪ್ರವೀಣ್ ಕುಮಾರ್ ಜೈನ್ ಮತ್ತು ಅಂಜು ಜೈನ್ ದಂಪತಿಯ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪ್ರಸನ್ನ ವಿ. ವರಾಲೆ ಅವರ ಪೀಠವು ಈ ನಿರ್ಧಾರ ಪ್ರಕಟಿಸಿದೆ. ಪ್ರವೀಣ್ ಕುಮಾರ್ ಜೈನ್ ಪತ್ನಿಗೆ ಜೀವನಾಂಶವಾಗಿ 5 ಕೋಟಿ ರೂ. ನೀಡುವಂತೆ ಸೂಚನೆ ನೀಡಿದೆ. ಜತೆಗೆ ಅವರ ವಯಸ್ಕ ಮಗನ ನಿರ್ವಹಣೆ ಮತ್ತು ಆರ್ಥಿಕ ಭದ್ರತೆಗಾಗಿ 1 ಕೋಟಿ ರೂ. ನೀಡುವಂತೆಯೂ ಸೂಚನೆ ನೀಡಿದೆ.
ಪ್ರಕರಣ ಏನು?: ಮದುವೆಯ ನಂತರ ಆರು ವರ್ಷಗಳ ಕಾಲ ಈ ದಂಪತಿ ಒಟ್ಟಿಗೆ ವಾಸವಿದ್ದರು. ನಂತರ 20 ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸಾಮರಸ್ಯ ಇಲ್ಲದಿರುವುದು ಮತ್ತು ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಜೀವನಾಂಶ ನಿರ್ಧಾರಕ್ಕೆ 8 ಸೂತ್ರ