ನ್ಯೂಸ್

ಸಂತ್ರಸ್ತೆಯೇ ಅಪಾಯವನ್ನು ಆಹ್ವಾನಿಸಿದ್ದಾಳೆ ಎಂದಿದ್ದ ಅಲಹಾಬಾದ್​ ನ್ಯಾಯಾಲಯಕ್ಕೆ ಸುಪ್ರಿಂಕೋರ್ಟ್​ ಛೀಮಾರಿ | Allahabad High Court

Allahabad High Court : ಸಂತ್ರೆಸ್ತೆಯೇ ತೊಂದರೆ(ದೌರ್ಜನ್ಯ)ಗೆ ಆಹ್ವಾನಿಸುವ ಮೂಲಕ ಆತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದ ಅಲಹಾಬಾದ್​ ಹೈಕೋರ್ಟ್​, ಅತ್ಯಾಚಾರಿಗೆ (ಏ.10) ಜಾಮೀನು ಮಂಜೂರು ಮಾಡಿತ್ತು. ಇದೀಗ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ಈ ಅವಲೋಕನಗಳನ್ನು ಅತ್ಯಂತ ಸೂಕ್ಷ್ಮವಲ್ಲದವು ಎಂದು ಪರಿಗಣಿಸಿದೆ.

ಪ್ರಕರಣದ ಘಟನೆ ಏನು..?

ಸಂತ್ರಸ್ತೆಯು ತನ್ನ ಮೂವರು ಮಹಿಳಾ ಸ್ನೇಹಿತರೊಂದಿಗೆ ದೆಹಲಿಯಲ್ಲಿನ ಬಾರ್​ವೊಂದಕ್ಕೆ ಹೋಗಿ ಅಲ್ಲಿ ಮದ್ಯ ಸೇವಿಸಿದ್ದರು. ಬೆಳಗಿನ ಜಾವ 3 ಗಂಟೆಯವರೆಗೆ ಅತಿಯಾದ ಮದ್ಯ ಸೇವನೆ ಮಾಡಿದ್ದರಿಂದ ಅಲ್ಲಿಯೆ ಇರಬೇಕಾಯಿತು ಎಂದು ಸಂತ್ರಸ್ತೆ ಹೇಳಿದ್ದಾಳೆ ಎಂದು ವರದಿಯಾಗಿತ್ತು.

ಇವರ ಬಳಿ ಇದ್ದ ಆರೋಪಿಯು ಮನೆಗೆ ಹೋಗಲು ಆಕೆಯನ್ನು ಒತ್ತಾಯಿಸಿದ್ದಾನೆ. ಬೆಳಗಿನ ಜಾವ ಕಾರಣದಿಂದ ಆರೋಪಿ ಜತೆ ಮನೆಗೆ ಹೋಗಲು ವಿಶ್ರಾಂತಿಗೆ ಹೋಗಲು ಒಪ್ಪಿದ್ದಾಳೆ. ಆರೋಪಿಯು ಪ್ರಯಾಣದ ಸಮಯದಲ್ಲಿ ಅನುಚಿತವಾಗಿ ಸ್ಪರ್ಶಿಸಿ ನೋಯ್ಡಾದಲ್ಲಿರುವ ತನ್ನ ಸ್ವಂತ ಮನೆಗೆ ಬದಲಾಗಿ ಗುರಗಾಂವ್‌ನಲ್ಲಿರುವ ತನ್ನ ಸಂಬಂಧಿಕರ ಫ್ಲಾಟ್‌ಗೆ ಕರೆದೊಯ್ದಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಅಲ್ಲಿ ಆರೋಪಿಯು ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಇದ್ದ ಪೀಠ , "ಸಂತ್ರಸ್ತಳ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಆಕೆಯೇ ತೊಂದರೆಗೆ ಆಹ್ವಾನ ನೀಡಿದ್ದಾಳೆ ಮತ್ತು ಅದಕ್ಕೆ ಕಾರಣಳಾಗಿದ್ದಾಳೆ ಎಂದು ತೀರ್ಮಾನಿಸಬಹುದು ಎಂದು ಈ ನ್ಯಾಯಾಲಯ ಅಭಿಪ್ರಾಯಪಟ್ಟಿದೆ''.

ಸಂತ್ರಸ್ತೆಯೂ ತನ್ನ ಹೇಳಿಕೆಯಲ್ಲಿ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ" ಎಂದು ಹೇಳಿದ್ದರು ಎಂದು ಉಲ್ಲೇಖಿಸಿದೆ.

ವಿವಾದತ್ಮಕ ತೀರ್ಪು

ಮಹಿಳೆಯ ಸ್ತನಗಳನ್ನು ಹಿಡಿಯುವುದು ಮತ್ತು ಆಕೆಯ ಪೈಜಾಮದ ದಾರ ಎಳೆಯುವುದು ಅತ್ಯಾಚಾರಕ್ಕೆ ಯತ್ನಿಸಿದಂತಲ್ಲ ಎಂದು ಅಲಹಾಬಾದ್​ ಕೋರ್ಟ್​ ನ್ಯಾಯಧೀಶರ ವಿವಾದತ್ಮಾಕ ತೀರ್ಪು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಘಟನೆಯ ಕೆಲ ವಾರಗಳ ಬಳಿಕ ಅದೇ ಕೋರ್ಟ್​ನ ನ್ಯಾಯಮೂರ್ತಿಯೊಬ್ಬರು​ ಅತ್ಯಾಚಾರಿಗೆ ಜಾಮೀನು ಮಂಜೂರು ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.(ಏಜೆನ್ಸೀಸ್​)