ನವದೆಹಲಿ: ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ(Ranveer Allahbadia) ಸುಪ್ರೀಂಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಸುಪ್ರೀಂಕೋರ್ಟ್ ಸೋಮವಾರ(ಮಾರ್ಚ್ 3) ರಣವೀರ್ ಅಲಹಾಬಾದ್ ಅವರಿಗೆ ತಮ್ಮ ಪಾಡ್‌ಕ್ಯಾಸ್ಟ್‌ಗಳು ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಅನುಮತಿ ನೀಡಿದೆ. ರಣವೀರ್ ಅಲ್ಲಾಬಾಡಿಯಾ ಬಂಧನದಿಂದ ನೀಡಲಾಗಿದ್ದ ರಕ್ಷಣೆಯ ಅವಧಿಯನ್ನು ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.
ಇದನ್ನು ಓದಿ: ಹೇಳಿಕೆ ದಾಖಲಿಸಲು ಸಿದ್ಧ; ಸಮನ್ಸ್ಗೆ ಗೈರಾಗಿದ್ದ ರಣವೀರ್ ಅಲ್ಲಾಬಾಡಿಯಾ ಹೇಳಿದಿಷ್ಟು.. | Ranveer Allahbadia
ಗುವಾಹಟಿಯಲ್ಲಿ ತನಿಖೆಗೆ ಸಹಕರಿಸಲು ಸುಪ್ರೀಂಕೋರ್ಟ್ ರಣವೀರ್ ಅಲ್ಲಾಬಾಡಿಯಾಗೆ ಹೇಳಿದೆ. ಸಮಯ್ ರೈನಾ ಅವರ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅಸ್ಸಾಂ ಪೊಲೀಸರು ಮತ್ತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಣವೀರ್ ಅಲ್ಲಾಬಾಡಿಯಾ ಅವರ ಆನ್‌ಲೈನ್ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಸುಪ್ರೀಂ ಕೋರ್ಟ್ ಸೋಮವಾರ ನಿಷೇಧವನ್ನು ತೆಗೆದುಹಾಕಿದೆ. ಇದರೊಂದಿಗೆ ನ್ಯಾಯಾಲಯವು ಅವರ ಪ್ರದರ್ಶನಗಳು ಸಭ್ಯತೆ ಮತ್ತು ನೈತಿಕತೆಯ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿತು. ಫೆಬ್ರವರಿ 18ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ರಣವೀರ್ ಅಲ್ಲಾಬಾಡಿಯಾಗೆ ಬಂಧನದಿಂದ ಮಧ್ಯಂತರ ರಕ್ಷಣೆಯ ಭಾಗವಾಗಿ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಷರತ್ತು ವಿಧಿಸಿತ್ತು.
ತನ್ನ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ತಡೆಯುವ ನ್ಯಾಯಾಲಯದ ಆದೇಶದ ಒಂದು ಭಾಗವನ್ನು ತೆಗೆದುಹಾಕುವಂತೆ ರಣವೀರ್ ಕೋರಿದ್ದರು. ರಣವೀರ್ ಅವರ ವಕೀಲರು 280 ಉದ್ಯೋಗಿಗಳಿದ್ದು, ಇದು ಅವರ ಜೀವನೋಪಾಯ ಎಂದು ವಾದಿಸಿದರು.