ನ್ಯೂಸ್

ಅಭಿಮಾನಿಗಳಿಗೆ ತಲೈವಾ ರಜನಿಕಾಂತ್​​ ಸಂದೇಶ; ದಳಪತಿ ವಿಜಯ್​ ಕುರಿತು ಸೂಪರ್​ಸ್ಟಾರ್​​ ಹೇಳಿದ್ದೇನು ಗೊತ್ತಾ? | Rajanikant

ಚೆನ್ನೈ: ಪ್ರತಿಯೊಬ್ಬ ಸಿನಿಮಾ ಸೆಲಿಬ್ರಿಟಿಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಸೆಲೆಬ್ರಿಟಿಗಳೂ ವೈಯಕ್ತಿಕವಾಗಿ ಪರಸ್ಪರ ಚೆನ್ನಾಗಿಯೇ ಇದ್ದರೂ ಯಾವುದಾದರೂ ಸಣ್ಣ ವಿಚಾರಕ್ಕೆ ಅವರ ಅಭಿಮಾನಿಗಳ ಮಧ್ಯೆ ವಾರ್​​ ಆರಂಭವಾಗುತ್ತದೆ. ಈ ರೀತಿಯ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಸ್ಯಾಂಡಲ್​ವುಡ್​ ಒಂದೇ ಅಲ್ಲಾ ಇದು ಎಲ್ಲ ಸಿನಿಮಾ ಇಂಡಸ್ಟ್ರಿಗಳಲ್ಲೂ ಇರುವ ಅಳಿಸಲಾಗದ ಸತ್ಯ. ಈ ರೀತಿ ಕೋಲ್ಡ್​ವಾರ್​ ಮಾಡುವ ಅಭಿಮಾನಿಗಳಿಗೆ ಹೆಸರಾಂತ ನಟರೊಬ್ಬರು ಸಂದೇಶವೊಂದನ್ನು ಹೇಳಿದ್ದಾರೆ.

ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​(Rajanikant) ಹಾಗೂ ದಳಪತಿ ವಿಜಯ್​​ ಯಾರಿಗೆ ಗೊತ್ತಿಲ್ಲ ಹೇಳಿ. ಒಬ್ಬರು ಹೆಚ್ಚು ಇನ್ನೊಬ್ಬರು ಕಡಿಮೆ ಎನ್ನುವಂತಿಲ್ಲ, ಇಬ್ಬರಿಗೂ ತಮ್ಮದೇ ಆದ ಫ್ಯಾನ್​ ಫಾಲೋಯಿಂಗ್​ ಇದೆ. ಅಭಿಮಾನಿಗಳ ನಡುವಿನ ವಾಕ್ಸಾಮರಕ್ಕೆ ಪೂರ್ಣವಿರಾಮ ಇಡುವಂತೆ ತಲೈವಾ ಬುದ್ಧಿಮಾತನ್ನು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಲೈವಾ ರಜನಿಕಾಂತ್​, ದಳಪತಿ ವಿಜಯ್​​ ನನಗೆ ಪೈಪೋಟಿ ಎಂದುಕೊಂಡರೆ ಅದು ನನಗೆ ಮರ್ಯಾದೆಯೂ ಅಲ್ಲ, ಗೌರವವೂ ಅಲ್ಲ. ಅದೇ ಮಾದರಿಯಲ್ಲಿ ವಿಜಯ್​ ಕೂಡ ನನ್ನನ್ನು ಪೈಪೋಟಿ ಎಂದುಕೊಂಡರೆ ಅವರಿಗೂ ಅದು ಮರ್ಯಾದೆ ಅಲ್ಲ, ಗೌರವವಲ್ಲ. ದಯವಿಟ್ಟು ನಮ್ಮಿಬ್ಬರು ಅಭಿಮಾನಿಗಳು ಈ ರೀತಿಯ ವಾಕ್ಸಮರಕ್ಕೆ ಅಥವಾ ಫೈಟ್​ ಮಾಡಬೇಡಿ ಎಂದು ಹೇಳಿದ್ದಾರೆ.

<p>" class="alignnone size-full wp-image-2431014" height="400" src="https://www.vijayavani.net/wp-content/uploads/2024/10/Untitled-design-2024-10-26T183135.624.webp" width="600"/>

ದಳಪತಿ ವಿಜಯ್​​ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸಿರುವುದು ಗೊತ್ತೆ ಇದೆ. ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್​ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಸೆಪ್ಟೆಂಬರ್ 5ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ವಿಜಯ್ ದ್ವಿಪಾತ್ರದಲ್ಲಿ ಮಿಂಚಿದ್ದರು. ಪ್ರಶಾಂತ್, ಪ್ರಭುದೇವ, ಸ್ನೇಹ, ಲೈಲಾ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೀಸ್ಟ್ ಚಿತ್ರದಲ್ಲಿ ವಿಜಯ್ ಜತೆ ಜೋಡಿಯಾಗಿದ್ದ ಪೂಜಾ ಹೆಗ್ಡೆ ಮತ್ತೊಮ್ಮೆ ದಳಪತಿ ಮುಂದಿನ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸೂಪರ್​ ಸ್ಟಾರ್​​ ರಜನಿಕಾಂತ್​​​ ನಟನೆಯ ವೆಟ್ಟೈಯಾನ್​ ಸಿನಿಮಾ ಅಕ್ಟೋಬರ್​ 10ರಂದು ಬಿಡುಗಡೆಯಾಯಿತು. ಸಿನಿಮಾದಲ್ಲಿ ಬಾಲಿವುಡ್ ಬಿಗ್​ಬಿ ಅಮಿತಾಭ್​ ಬಚ್ಚನ್​, ಮಂಜು ವಾರಿಯರ್, ರಿತಿಕಾ ಸಿಂಗ್, ದುಶ್ರಾ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾ ರಜನಿಕಾಂತ್​​​ ಅವರು ಮುಂದಿನ ಚಿತ್ರವಾಗಿದ್ದು 2025ರ ದ್ವಿತೀಯಾರ್ಧದಲ್ಲಿ ರಿಲೀಸ್​ ಆಗುವ ನಿರೀಕ್ಷೆಯಿದೆ.(ಏಜೆನ್ಸೀಸ್​​)