ನ್ಯೂಸ್

ನೀಲಿಚಿತ್ರಗಳಲ್ಲಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಸೂಪರ್​ಕಾರ್​ ಚಾಲಕಿ!

ಮೆಲ್ಬೋರ್ನ್​: ಮೋಟಾರ್​ಸ್ಪೋರ್ಟ್ಸ್​ ಕ್ಷೇತ್ರದಲ್ಲಿ ಚಾಲಕರಾಗಿರುವವರಿಗೆ ಕೀರ್ತಿ, ಮನ್ನಣೆ ಮತ್ತು ಹಣಕ್ಕೆ ಯಾವುದೇ ಕೊರತೆಯಿರುವುದಿಲ್ಲ. ಅವರ ವೈಭವೋಪೇತ ಜೀವನ ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಹೀಗಿದ್ದರೂ, ಈ ಕ್ಷೇತ್ರದಲ್ಲಿ 14 ವರ್ಷ ಕಷ್ಟಪಟ್ಟು ದುಡಿದು, ಆಸ್ಟ್ರೇಲಿಯಾದ ಮೊದಲ ಸೂಪರ್​ಕಾರ್​ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುಂದರಿ ರೆನ್ನೀ ಗ್ರೇಸಿಗೆ ವೃತ್ತಿಯಲ್ಲಾಗಲಿ, ಆರ್ಥಿಕವಾಗಿಯಾಗಲಿ ಏನೊಂದು ಲಾಭವಾಗಲಿಲ್ಲವಂತೆ. ದಿನಗಳದೆಂತೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಾ ಹೋಯಿತೇ ಹೊರತು, ಕಡಿಮೆಯಾಗಲಿಲ್ಲವಂತೆ.

ಈ ಹಿನ್ನೆಲೆಯಲ್ಲಿ ಅವರು ವೃತ್ತಿಯನ್ನು ಬದಲಿಸುವ ನಿರ್ಧಾರಕ್ಕೆ ಬಂದರು. ನೀಲಿಚಿತ್ರಗಳ ತಾರೆಯಾದರೆ ಕೈತುಂಬಾ ದುಡ್ಡು ಬರುತ್ತದೆ ಎಂದು ಯಾರೋ ಹೇಳಿದ್ದು ಕೇಳಿಸಿಕೊಂಡು, ಪೋರ್ನ್​ ವೆಬ್​ಸೈಟ್​ ಜತೆ ಒಪ್ಪಂದ ಮಾಡಿಕೊಂಡಿಯೇ ಬಿಟ್ಟರಂತೆ. ಇದೀಗ ವೆಬ್​ಸೈಟ್​ನಲ್ಲಿ 7 ಸಾವಿರಕ್ಕೂ ಹೆಚ್ಚು ಫಾಲೋಯರ್ಸ್​ಗಳನ್ನು ಹೊಂದಿರುವ ಅವರು ವಾರಕ್ಕೆ 1.88 ಲಕ್ಷ ರೂಪಾಯಿಂದ 2.26 ಲಕ್ಷ ರೂಪಾಯಿವರೆಗೆ ಸಂಪಾದಿಸುತ್ತಿದ್ದಾರಂತೆ!

ಇದು ರೆನ್ನೀ ಗ್ರೇಸಿಯೇ ಹೇಳಿಕೊಂಡಿರುವ ಕಥೆ. ಸೂಪರ್​ಕಾರ್​ ಕ್ಷೇತ್ರದಲ್ಲಿ 14 ವರ್ಷ ಕಷ್ಟಪಟ್ಟ ಬಳಿಕ ಆಸ್ಟ್ರೇಲಿಯಾದ ಮೊದಲ ಸೂಪರ್​ಕಾರ್​ ಚಾಲಕಿಯಾಗುವ ಅವಕಾಶ ದೊರೆಯಿತು. ಸಿಮೋನಾ ಡಿ ಸಿಲ್ವೆಸ್ಟ್ರೋ ಅವರ ಜತೆಗೂಡಿ 2015ರಲ್ಲಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಬಾತ್ರಸ್ಟ್​ ಸೂಪರ್​ಕಾರ್​ ರೇಸ್​ನಲ್ಲಿ ಪಾಲ್ಗೊಂಡಿದ್ದೆ. 1998ರ ನಂತರದಲ್ಲಿ ಈ ರೇಸ್​ನಲ್ಲಿ ಪಾಲ್ಗೊಂಡ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆ ನಮ್ಮದಾಗಿತ್ತು. ಆದರೆ, ಇದಾದ ಬಳಿಕ ರೇಸಿಂಗ್​ನಲ್ಲಿ ಹೇಳಿಕೊಳ್ಳುವಂಥ ಅವಕಾಶಗಳಾಗಲಿ, ಹಣವಾಗಲಿ ಸಿಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡೆ ಎಂದು ವಿವರಿಸುತ್ತಾರೆ.

ರೇಸಿಂಗ್​ ಬಿಟ್ಟ ಮೇಲೆ ಸ್ಥಳೀಯ ಕಾರು ದುರಸ್ತಿ ಕೇಂದ್ರದಲ್ಲಿ ಕೆಲಸ ಮಾಡಿದರೂ ಅಲ್ಲಿಯೂ ಬರಕ್ಕತ್ತಾಗಲಿಲ್ಲ. ಇದರಿಂದ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ, ನೀಲಿಚಿತ್ರಗಳ ತಾರೆಯಾದರೆ ಹೇಗೆ ಎಂಬ ಪ್ರಶ್ನೆ ಮೂಡಿತು. ತಕ್ಷಣವೇ ನೀಲಿಚಿತ್ರಗಳ ತಾರೆಯಾಗಲು ನಿರ್ಧರಿಸಿದೆ ಎಂದು ಹೇಳುತ್ತಾರೆ.

ನೋಡಲು ಸುಂದರವಾಗಿರುವ, ಆಕರ್ಷಕ ಮೈಮಾಟ ಹೊಪಂದಿರುವ ಅವರು, ಪೋರ್ನ್​ ವೆಬ್​ಸೈಟ್​ಗಳಲ್ಲಿ ತಮ್ಮ ದೇಹವೈಭವವನ್ನು ವಿಡಿಯೋ ಮತ್ತು ಭಾವಚಿತ್ರಗಳ ರೂಪದಲ್ಲಿ ಹರಿಬಿಡುತ್ತಾರೆ. ಈ ವೃತ್ತಿ ಆರಂಭಿಸಿದ ಮೊದಲ ವಾರವೇ ತಮಗೆ 2.26 ಲಕ್ಷ ರೂ. ಹಣ ಸಿಕ್ಕಿದ್ದಾಗಿ ತಿಳಿಸುತ್ತಾರೆ.

ನನ್ನ ನೀಲಿಚಿತ್ರಗಳಿಗಾಗಿ 7 ಸಾವಿರಕ್ಕೂ ಹೆಚ್ಚಿನ ಫಾಲೋಯರ್ಸ್​ ಇದ್ದಾರೆ. ಇದರಿಂದಾಗಿ ಈಗ ವಾರಕ್ಕೆ ಕನಿಷ್ಠ 1.88 ಲಕ್ಷ ರೂಪಾಯಿಗಂತೂ ಮೋಸವಿಲ್ಲ. ಹಾಗಾಗಿ ನಾನು ನನ್ನ ಜೀವನದಲ್ಲಿ ಕೈಗೊಂಡ ಅತ್ಯುತ್ತಮ ನಿರ್ಧಾರ ಇದು ಎನಿಸುತ್ತಿದೆ ಎಂದು ಹೇಳುತ್ತಾರೆ.

ಕೈತುಂಬಾ ಹಣ ಬರುತ್ತಿರುವುದರಿಂದ ಆರ್ಥಿಕವಾಗಿ ಸ್ಥಿತಿವಂತಳಾಗಿದ್ದೇನೆ. ನನ್ನ ಜೀವನದಲ್ಲಿ ಇಷ್ಟೊಂದು ಹಣ ನೋಡುತ್ತೇನೆ ಎಂದು ಕನಸುಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನನ್ನು ಯಾರು, ಏನೆಂದು ಬೇಕಾದರೂ ಕರೆಯಲಿ, ಈಗ ನಾನು ಚೆನ್ನಾಗಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ.