ನ್ಯೂಸ್

VIDEO| ತರಕಾರಿ ಕತ್ತರಿಸುವಾಗ ಸನ್ನಿ ಲಿಯೋನ್​ ಬೆರಳು ಕಟ್! ಗಾಬರಿಯಾದ ಪತಿ ಮಾಡಿದ್ದೇನು?

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಅಭಿಮಾನಿಗಳ ಜತೆ ಸಮಯ ಕಳೆದು, ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು ಸನ್ನಿ ಲಿಯೋನ್​. ಆದರೆ, ಈ ಬಾರಿಯ ಭಾನುವಾರ ತುಂಬ ವಿಭಿನ್ನವಾಗಿತ್ತು. ಮತ್ತು ನೆನಪಿನಲ್ಲಿಟ್ಟುಕೊಳ್ಳುವಂತಿತ್ತು. ಅಂದರೆ, ಮಧ್ಯಾಹ್ನದ ಹೊತ್ತಿಗೆ ತರಕಾರಿ ಕತ್ತರಿಸಲು ಅಡುಗೆ ಮನೆಗೆ ಹೋಗಿದ್ದ ಸನ್ನಿ ಲಿಯೋನ್​, ಏಕಾಏಕಿ ಬೆರಳನ್ನು ಕತ್ತರಿಸಿಕೊಂಡಿದ್ದಾರೆ. ಗಾಬರಿಯಿಂದ ಪತಿ ಡೇನಿಯಲ್​ ಅವರನ್ನು ಕರೆದಿದ್ದಾರೆ. ದಿಕ್ಕು ತೋಚದೆ ಓಡಿ ಬಂದ ಡೇನಿಯಲ್​, ಬಟ್ಟೆ ಸುತ್ತಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಆಗಲೇ ನೋಡಿ ಅಸಲಿ ಕಥೆಯನ್ನು ಸನ್ನಿಲಿಯೋನ್​ ಹೊರಗೆಡವಿದ್ದಾರೆ. ಡೇನಿಯಲ್​ಗೆ ಇದು ಪ್ರ್ಯಾಂಕ್​ ವಿಡಿಯೋ ಎಂದಿದ್ದಾರೆ!

ಈ ಪ್ರ್ಯಾಂಕ್​ಗೂ ಮುನ್ನ ಲೈವ್​ನಲ್ಲಿ ಡೇನಿಯಲ್​ಗೆ ಪ್ರ್ಯಾಂಕ್​ ಮಾಡುವ ಬಗ್ಗೆ ಅಭಿಮಾನಿಗಳ ಜತೆ ಸನ್ನಿಲಿಯೋನ್​ ಹೇಳಿಕೊಂಡಿದ್ದರು. ಅಚ್ಚರಿ ಏನೆಂದರೆ, ಹಾಗೆ ಹೇಳಿದ್ದ ಸನ್ನಿ ಮಾತನ್ನು ಡೇನಿಯಲ್​ ಕೇಳಿಸಿಕೊಂಡಿಲ್ಲ ಅನಿಸುತ್ತೆ. ಲೈವ್​ ಚಾಟ್​ ಮುಗಿಯುತ್ತಿದ್ದಂತೆ, ರಕ್ತವನ್ನೇ ಹೋಲುವ ಕೆಂಪು ಬಣ್ಣ ಮತ್ತು ಬೆರಳ ಹೋಲಿಕೆಯ ವಸ್ತುವನ್ನು ಕೈಬಳಿ ಇಟ್ಟುಕೊಂಡು ಕತ್ತರಿಸಿಕೊಂಡಿದ್ದಾರೆ. ಪಕ್ಕದಲ್ಲೇ ವಿಡಿಯೋ ರೆಕಾರ್ಡಿಂಗ್​ ಸಹ ಆನ್​ ಮಾಡಿ ಪೂರ್ತಿ ಪ್ರಹಸನವನ್ನು ರೆಕಾರ್ಡ್​ ಮಾಡಿದ್ದಾರೆ.

ಇದೆಲ್ಲ ಮುಗಿದ ಬಳಿಕ, ಹೇಗಿತ್ತು ಪ್ರ್ಯಾಂಕ್​ ಎಂದು ಡೇನಿಯಲ್​ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಜೀವನದಲ್ಲಿ ನಾನು ತುಂಬ ಗಂಭೀರ ಸ್ವಭಾವದವನು. ಅದೇ ನನ್ನ ವ್ಯಕ್ತಿತ್ವ. ಮತ್ತೆ ಪ್ರ್ಯಾಂಕ್​​ಗಳೆಂದರೆ ನನಗೆ ಆಗಿಬರಲ್ಲ. ಬೇರೆಯವರಿಗೆ ಮಾಡುವುದಾಗಲಿ, ನನ್ನ ಮೇಲೆ ಪ್ರಯೋಗ ಮಾಡುವುದಾಗಲಿ ಇಷ್ಟ ಆಗುವುದಿಲ್ಲ. ಹಾಗಾಗಿ ನೀನು ಮಾಡಿದ ಈ ಕೆಲಸಕ್ಕೆ ನಾನು ರೇಟಿಂಗ್​ ಕೊಡುವುದಿಲ್ಲ. ನನಗನಿಸಿದ ಮಟ್ಟಿಗೆ ನಿನ್ನ ಈ ಕೆಲಸ ಜೀರೋ. ಯಾಕೆಂದರೆ, ಇದೆಲ್ಲ ನನಗೆ ಇಷ್ಟವಾಗುವುದಿಲ್ಲ’ ಎಂದಿದ್ದಾರೆ ಡೇನಿಯಲ್​. (ಏಜೆನ್ಸೀಸ್​)