ವಾಷಿಂಗ್ಟನ್ ಡಿಸಿ: ಒಂಬತ್ತು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunita Williams) ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಮಾರ್ಚ್ 19ರ ಮೊದಲು ಭೂಮಿಗೆ ಹಿಂತಿರುಗುವುದಿಲ್ಲ ಎಂದು ನಾಸಾ ದೃಢಪಡಿಸಿದೆ.
ಇದನ್ನು ಓದಿ: ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳು ಭೂಮಿಗೆ ಮರಳುವುದು ಯಾವಾಗ?; ಈ ಬಗ್ಗೆ ನಾಸಾ ಹೇಳಿದಿಷ್ಟು.. | NASA
ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಜೂನ್ 2024ರಲ್ಲಿ ಐಎಸ್ಎಸ್ಗೆ ಎಂಟು ದಿನಗಳ ಕಾಲ ಒಂದು ಕಾರ್ಯಾಚರಣೆಗೆ ಹೋಗಿದ್ದರು. ಆದರೆ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಲ್ಲಿಯೇ ಸಿಲುಕಿಕೊಂಡರು.
ನಾಸಾ ಆರಂಭದಲ್ಲಿ ಕ್ರೂ-10 ಅನ್ನು ಉಡಾವಣೆ ಮಾಡಲು ಯೋಜಿಸಿತ್ತು. ಆದರೆ ಉಡಾವಣಾ ಪ್ಯಾಡ್‌ನಲ್ಲಿ ಬಲವಾದ ಗಾಳಿ ಮತ್ತು ಮಳೆಯಿಂದಾಗಿ ಕಾರ್ಯಾಚರಣೆಯನ್ನು ವಿಳಂಬಗೊಳಿಸಬೇಕಾಯಿತು. ಇದರ ಜತೆಗೆ ಸ್ಪೇಸ್‌ಎಕ್ಸ್ ಎಂಜಿನಿಯರ್‌ಗಳು ಲಾಂಚ್ ಕಾಂಪ್ಲೆಕ್ಸ್ 39Aನಲ್ಲಿ ಫಾಲ್ಕನ್ 9 ರಾಕೆಟ್‌ಗಾಗಿ ಗ್ರೌಂಡ್ ಸಪೋರ್ಟ್ ಕ್ಲ್ಯಾಂಪ್ ಆರ್ಮ್‌ನಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯನ್ನು ಎದುರಿಸಿದ್ದಾರೆ.
ನಾಸಾದ ಹೊಸ ವರದಿಯ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ಮಾರ್ಚ್ 15 ಅಥವಾ 16 ರಂದು ಉಡಾವಣೆ ನಡೆದರೆ ಹಿಂತಿರುಗಲು ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಅದಕ್ಕಾಗಿಯೇ ಕ್ರೂ-10 ಮಾರ್ಚ್ 15ರಂದು ಐಎಸ್ಎಸ್ಗೆ ಆಗಮಿಸಿ ಡಾಕ್ ಮಾಡಲಿದೆ. ನಂತರ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಒಳಗೊಂಡ ಕ್ರೂ-9 ನಿಂದ ಕಾರ್ಯಾಚರಣೆಗಳನ್ನು ವಹಿಸಿಕೊಳ್ಳುವ ಮೊದಲು ಹವಾಮಾನಕ್ಕೆ ಒಗ್ಗಿಕೊಳ್ಳಲು ಕೆಲವು ದಿನಗಳನ್ನು ಕಳೆಯುತ್ತಾರೆ. ಈ ಕಾರಣದಕ್ಕಾಗಿಯೇ ಸುನೀತಾ ಮತ್ತು ಅವರ ಸಹ ಗಗನಯಾತ್ರಿ ಮಾರ್ಚ್ 19ರ ಮೊದಲು ಭೂಮಿಗೆ ಹಿಂತಿರುಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.(ಏಜೆನ್ಸೀಸ್)