ಚೆನ್ನೈ: ತಮಿಳುನಾಡು ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ನಟ ಕಮಲ ಹಾಸನ್ ಕೂಡ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರಕ್ಕೆ ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್ ಹೋಗಿದ್ದು, ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ.
ಕಮಲ ಹಾಸನ್ ಅವರು ಮಕ್ಕಲ್ ನಿಧಿ ಮಾಯಂ (ಎಮ್‍ಎನ್‍ಎಮ್) ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬ್ಯಾಟರಿ ಚಿನ್ನೆಯನ್ನು ಇಟ್ಟುಕೊಂಡಿರುವ ಅವರಿಗೆ ಮತ ನೀಡಿ ಎಂದು ಸುಹಾಸಿನಿ ಅವರು ಬೀದಿಗಿಳಿದು ಪ್ರಚಾರ ಮಾಡಿದ್ದಾರೆ.
ಪ್ರಚಾರದ ವೇಳೆ ತಮಟೆಯವರು ತಮಟೆ ಬಾರಿಸಿದ್ದಾರೆ. ಅದಕ್ಕೆ ತಕ್ಕಂತೆ ಸುಹಾಸಿನಿ ಹಾಗೂ ನಟಿ ಅಕ್ಷರಾ ಹಾಸನ್ ಹೆಜ್ಜೆ ಹಾಕಿದ್ದಾರೆ. ಅವರ ಜತೆ ಪಕ್ಷದ ಕೆಲ ಬೆಂಬಲಿಗರೂ ನೃತ್ಯ ಮಾಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಕೈನಲ್ಲಿ ಟಾರ್ಚ್ ಹಿಡಿದು ನೃತ್ಯ ಮಾಡಿರುವುದು ಸಕತ್ ವೈರಲ್ ಆಗಿದೆ. (ಏಜೆನ್ಸೀಸ್)