ಬೆಂಗಳೂರು: ಹೆಣ್ಣು ಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಲೊಕೆಂಟೋ ಗ್ಯಾಂಗ್ನನ್ನು ಸುದ್ಗುಂಟೆಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ನಟ ಮಂಜುನಾಥ್, ಲೊಕೆಂಟೋ ಆ್ಯಪ್ ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ. ಹುಡುಗಿಯರ ಫೋಟೋ ಬಳಸಿಕೊಂಡು ಲೊಕೇಂಟೋ ಆ್ಯಪ್ನಲ್ಲಿ ಗ್ರಾಹಕರನ್ನು ಸೆಳೆದು, ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅಲ್ಲದೆ, ಆನ್ಲೈನ್ ಹಾಗೂ ಮುಖತಃ ಭೇಟಿಯಾಗಿ ಗ್ರಾಹಕರಿಂದ ಹಣ ಪಡೆದುಕೊಳ್ಳುತ್ತಿದ್ದರು.
ಈ ಸಂಬಂಧ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ಮಂಜುನಾಥ್ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಾಮುಕರ ಅಡ್ಡೆಯಾಗಿರುವ ಲೊಕೆಂಟೋ ಆ್ಯಪ್ ಬಳಸಿಕೊಂಡು ನಟನೆ ಬಿಟ್ಟು ನಟ ಮಂಜುನಾಥ್ ಹೆಣ್ಣು ಮಕ್ಕಳ ದಂಧೆಗಿಳಿದಿದ್ದ. 2019ರಲ್ಲಿ ಬಿಡುಗಡೆಯಾಗಿದ್ದ ನ್ಯೂರಾನ್ ಎಂಬ ಚಿತ್ರದಲ್ಲಿ ಯುವ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಈ ಚಿತ್ರದ ನಾಯಕನೇ ಪ್ರಮುಖ ಆರೋಪಿ.