ಮೇಘಾಲಯ ರಾಜ್ಯ ಸರ್ಕಾರದಲ್ಲಿ ಮಂಗಳವಾರ ಹೊಸ ಬೆಳವಣಿಗೆ ನಡೆದಿದ್ದು ಸಚಿವ ಸಂಪುಟದಲ್ಲಿನ 8 ಸಚಿವರು ದಿಢೀರ್ಮ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ನಾಯಕರಾದ ಎಎಲ್ ಹೆಕ್, ಪಾಲ್ ಲಿಂಗ್ಡೋ ಮತ್ತು ಅಂಪರೀನ್ ಲಿಂಗ್ಡೋ ಸೇರಿದಂತೆ 8 ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:Chanakya Niti: ಈ ಮಾರ್ಗಗಳನ್ನು ಅನುಸರಿಸಿದರೆ, ನೀವು ಏನನ್ನೂ ಹೇಳದೆಯೇ ನಿಮ್ಮ ಶತ್ರುವನ್ನು ಸೋಲಿಸಬಹುದು..!
ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಸಿಎಚ್ ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಘಾಲಯ ಸಚಿವ ಸಂಪುಟ ಪುನರ್ರಚನೆ ಇಂದು(ಮಂಗಳವಾರ) ನಡೆಯಲಿದೆ. ಈ ಹಿನ್ನೆಲೆ ಹೊಸಬರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಪುಟ ಪುನರ್ರಚನೆ ಮುಂಚಿತವಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)