ಆನ್​ಲೈನ್​ ಗೇಮ್‌ ಚಟ: 13 ಲಕ್ಷ ರೂ. ಕಳೆದುಕೊಂಡ 6ನೇ ತರಗತಿ ಬಾಲಕ!

Untitled design - 2025-09-16T133537.030
Published on

6ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಬ್ಯಾಂಕ್​ ಖಾತೆಯಿಂದ ಬರೊಬ್ಬರಿ 13 ಲಕ್ಷ ರೂ.ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ತಂದೆ ಪೇಂಟರ್ ಅಗಿ ಕೆಲಸ ಮಾಡುತ್ತಿದ್ದು, ಸುಮಾರು ಎರಡು ವರ್ಷಗಳಿಂದೆ ಭೂಮಿ ಮಾರಾಟ ಮಾಡುವ ಮೂಲಕ ತನ್ನ ಬ್ಯಾಂಕ್​ ಖಾತೆಗೆ 13 ಲಕ್ಷ ರೂ. ಜಮಾ ಮಾಡಿದ್ದರು.

ಸೋಮವಾರ, ಅವರು ತಮ್ಮ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅನ್ನು ನವೀಕರಿಸಲು ಹೋದಾಗ, ಅವರ ಬ್ಯಾಂಕ್ ಖಾತೆಯಲ್ಲಿ 13 ಲಕ್ಷ ರೂ.ಗಳಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಅಘಾತಕ್ಕೊಳಾಗದ ತಂದೆ-ತಾಯಿಗೆ ತಾವು ನಿಂತಿದ್ದ ನೆಲ ಒಮ್ಮೆ ಕುಸಿದಂತಾಗಿದೆ.

ಪಾಲಕರು ಕೂಡಲೇ ಪೊಲೀಸ್​ ಕಂಪ್ಲೇಟ್​ ಕೊಟ್ಟು ತನಿಖೆ ನಡೆಸಿದ್ದಾರೆ. ಬಳಿಕ ಆನ್‌ಲೈನ್ ಆಟವಾದ ಫ್ರೀ ಫೈರ್ ಮೂಲಕ ಈ ಬೃಹತ್ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮನೆಯಲ್ಲಿ ಮಗುವನ್ನು ವಿಚಾರಿಸಿದಾಗ ಹೆದರಿ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net