ಹೈದರಾಬಾದ್: ಲಾಕ್ಡೌನ್ನಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದಾಗಿದೆ. ಅಗತ್ಯ ಸಾಮಗ್ರಿ ಹಾಗೂ ತುರ್ತು ಸಂದರ್ಭಗಳನ್ನು ಹೊರತುಪಡಿಸಿದರೆ, ಉಳಿದಂತೆ ವಾಣಿಜ್ಯ ಅಥವಾ ಸರಕು ಸಾಗಣೆ ವಿಮಾಗಳಿಗೂ ಅವಕಾಶ ನೀಡಲಾಗುತ್ತಿಲ್ಲ.
ವಿದೇಶಗಳಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ವಾಪಸ್ ತಾಯ್ನಾಡಿಗೆ ಕರೆಯಿಸಿಕೊಳ್ಳಲು ಕೆಲ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಅಂತೆಯೇ, ಹೈದರಾಬಾದ್ನಲ್ಲಿದ್ದ ಸುಡಾನ್ ಮಹಿಳೆಯನ್ನು ಕರೆದೊಯ್ಯಲು ವಿಶೇಷ ವಿಮಾನ ಆಗಮಿಸಿತ್ತು. ಕ್ಯಾನ್ಸರ್ ಚಿಕಿತ್ಸೆ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿದ್ದ ಆಸ್ಪತ್ರೆಯಲ್ಲಿದ್ದ ಮಹಿಳೆಗೆ ಕೆಲ ಗಂಟೆಗಳನ್ನು ಕಳೆದಿದ್ದರೆ ತನ್ನ ತಾಯ್ನಾಡು ಸೇರಿಕೊಳ್ಳುತ್ತಿದ್ದಳು. ಆದರೆ, ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ.
ಬೆಳಗ್ಗೆ ಏಳು ಗಂಟೆಗೆ ರಾಜೀವ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 62 ವರ್ಷದ ಹಯೀದಾ ಮೊಹಮ್ಮದ್ ತಹಾ ಅಲಿ ಆಗಮಿಸಿದ್ದಳು. ಎಲ್ಲ ತಪಾಸಣೆಗಳನ್ನು ಪೂರೈಸಿ ಇನ್ನೇನು ವಿಮಾನವೇರಲು ನಿಂತಿದ್ದ ಮಹಿಳೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.
ಕೂಡಲೇ ಆಕೆಯನ್ನು ಅಪೊಲೋ ಆಸ್ಪತ್ರೆಗೆ ಕರೊದೊಯ್ಯಲಾಗಿದೆ. ಆಸ್ಪತ್ರೆಯಲ್ಲ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಏಳು ತಿಂಗಳಿನಿಂದ ಆಕೆ ವಿರಿಂಚಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.