ಮುಂಬೈ: ನಟಿ ಮತ್ತು ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ(Suchitra Krishnamoorthi) ಅವರು ತನ್ನ ಶೈಲಿ ಮತ್ತು ಹೇಳಿಕೆಗಳಿಂದಾಗಿ ಅನೇಕ ಬಾರಿ ಸುದ್ದಿಯಲ್ಲಿರುತ್ತಾರೆ. ಆದರೀಗ ತಾವು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಒಮ್ಮೆ ಮದುವೆ ಆಗುವಂತೆ ಕೇಳಿದ್ದಾಗಿ ಸುಚಿತ್ರಾ ತಿಳಿಸಿದ್ದಾರೆ. ಆದರೆ ಅದಕ್ಕೆ ರಾಮ್ ಗೋಪಾಲ್ ವರ್ಮ ಹೇಳಿದ್ದೇನು ಎಂಬುದನ್ನು ನಟಿ ಬಹಿರಂಗಪಡಿಸಿದ್ದಾರೆ.
2013ರ ತನ್ನ ಆತ್ಮಚರಿತ್ರೆ 'ಡ್ರಾಮಾ ಕ್ವೀನ್'ನಲ್ಲಿ ಸುಚಿತ್ರಾ ರಾಮ್ ಗೋಪಾಲ್ ವರ್ಮಾ ಅವರ ಸಂಗತಿಯನ್ನು ಉಲ್ಲೇಖಿಸುವಾಗ ಆಸಕ್ತಿದಾಯಕ ಘಟನೆಯನ್ನು ವಿವರಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರನ್ನು ಮದುವೆಯಾಗುವ ಬಗ್ಗೆ ಒಮ್ಮೆ ತಮಾಷೆ ಮಾಡಿದ್ದಾಗಿ ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ನೀನು ನನ್ನನ್ನು ಮದುವೆಯಾಗುತ್ತೀಯಾ ಎಂದು ರಾಮ್ ಗೋಪಾಲ್ ವರ್ಮಾ ಅವರಿಗೆ ಸುಚಿತ್ರಾ ಮೆಸೇಜ್ ಮಾಡಿದ್ದರಂತೆ.
ಈ ಸಂದೇಶವನ್ನು ಓದಿದ ನಂತರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆತಂಕಗೊಂಡು ಈ ವಿಚಾರವನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಲು ಅವರನ್ನು ಕಚೇರಿಗೆ ಕರೆದರಂತೆ. ನೀವು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಸಂಪೂರ್ಣವಾಗಿ ನಾವು ಒಂದೇ ಅಲ್ಲ. ನಾನು ಮದುವೆಯನ್ನು ನಂಬುವುದಿಲ್ಲ ಮತ್ತು ನಾನು ಮಹಿಳೆಯರನ್ನು ದೈಹಿಕ ಕಾರಣಗಳಿಗಾಗಿ ಮಾತ್ರ ಗೌರವಿಸುತ್ತೇನೆ ಅವರ ಬುದ್ಧಿವಂತಿಕೆಗಾಗಿ ಅಲ್ಲ ಎಂದು ಪ್ರತಿಕ್ರಿಯಿಸಿದರು ಎಂದು ಹೇಳಿದ್ದಾರೆ.
ಸುಚಿತ್ರಾ ಕೃಷ್ಣಮೂರ್ತಿ ಮತ್ತು ರಾಮ್ ಗೋಪಾಲ್ ವರ್ಮಾ ತಮ್ಮ ಸಂಬಂಧವನ್ನು ಎಂದಿಗೂ ಅಧಿಕೃತಗೊಳಿಸಲಿಲ್ಲ. ಆದರೆ ಸಂದರ್ಶನದಲ್ಲಿ ಸುಚಿತ್ರಾ ಕೃಷ್ಣಮೂರ್ತಿ ಅವರು ಪುಸ್ತಕದಲ್ಲಿ ಬರೆದದ್ದು ನಿಜ ಎಂದು ಖಚಿತಪಡಿಸಿದ್ದಾರೆ. ತನ್ನ ಮದುವೆಯ ಪ್ರಸ್ತಾಪವನ್ನು ರಾಮ್ ಗೋಪಾಲ್ ವರ್ಮಾ ಅವರು ತಿರಸ್ಕರಿಸಿದ್ದಾರೆ ಮತ್ತು ಅವರ ಪ್ರತಿಕ್ರಿಯೆಯನ್ನು ರಾಮು ಅನುಮತಿ ಪಡೆದ ನಂತರ ಅವರು ಸಾರ್ವಜನಿಕವಾಗಿ ಪ್ರಕಟಿಸಿದ್ದಾಗಿ ಹೇಳಿದ್ದಾರೆ. ಸುಚಿತ್ರಾ ಕೃಷ್ಣಮೂರ್ತಿ ಅವರು ರಾಮ್ ಗೋಪಾಲ್ ವರ್ಮಾ ಅವರೊಂದಿಗೆ 'ಮೈ ವೈಫ್ಸ್ ಮರ್ಡರ್' ಮತ್ತು 'ರನ್' ಚಿತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)