ನ್ಯೂಸ್

ಉತ್ತರಾಧಿಕಾರ ಯೋಜನೆ, ಮುಕೇಶ್ ಅಂಬಾನಿ ಚಿಂತನೆ: ವಾಣಿಜ್ಯ ವಿಚಾರ

ಭಾರತದ ಅತಿದೊಡ್ಡ ವಾಣಿಜ್ಯೋದ್ಯಮ ಸಾಮ್ರಾಜ್ಯ ರಿಲಯನ್ಸ್ ಇಂಡಸ್ಟ್ರೀಸ್. ಇದರ ಉತ್ತರಾಧಿಕಾರ ಯೋಜನೆಯ ಕುರಿತು ಮುಖ್ಯಸ್ಥ ಮುಕೇಶ್ ಅಂಬಾನಿ ಮಹತ್ವಾಕಾಂಕ್ಷೆಯ ಚಿಂತನೆ ಹೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ಜೂನ್ ತಿಂಗಳಲ್ಲಿ ನಡೆದ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಈ ಕುರಿತು ಸುಳಿವು ನೀಡಿದ್ದರು. ‘ರಿಲಯನ್ಸ್ ಅನ್ನು ಮುನ್ನಡೆಸಲು ಮುಂದಿನ ತಲೆಮಾರಿನ ನಾಯಕರಾದ ಇಶಾ, ಆಕಾಶ್ ಮತ್ತು ಅನಂತ್ ಸಿದ್ಧರಾಗಿದ್ದಾರೆ. ಅವರು ಈ ಅಮೂಲ್ಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ’ ಎಂದಿದ್ದರು.

ಉತ್ತರಾಧಿಕಾರದ ಯೋಜನೆ ರೂಪಿಸುವುದ ಕ್ಕಾಗಿ ಮುಕೇಶ್ ಅಂಬಾನಿ, ಜಗತ್ತಿನ ಶತಕೋಟ್ಯ ಧಿಪತಿಗಳ ಉದ್ಯಮ ಸಾಮ್ರಾಜ್ಯಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಈ ಪೈಕಿ ವಾಲ್​ವಾರ್ಟ್ ಸೃಷ್ಟಿಕರ್ತ ಸ್ಯಾಮ್ ವಾಲ್ಟನ್ ಅವರ ಉತ್ತರಾಧಿಕಾರ ಯೋಜನೆ ಕುರಿತು ಮುಕೇಶ್ ಒಲವು ವ್ಯಕ್ತವಾಗಿದೆ. ಇದು ಬಹಳ ಸರಳವಾಗಿದ್ದು, ಕುಟುಂಬವನ್ನು ವ್ಯವಸ್ಥೆಯ ಕೇಂದ್ರಸ್ಥಾನದಲ್ಲಿಟ್ಟು ಎಲ್ಲವೂ ನಿಯಂತ್ರಣ ದಲ್ಲಿರುವಂತೆ ನೋಡಿಕೊಳ್ಳುತ್ತದೆ; ದೈನಂದಿನ ಆಡಳಿತ ನೋಡಿಕೊಳ್ಳಲು ವೃತ್ತಿಪರರರನ್ನು ನೇಮಿಸಲಾಗುತ್ತದೆ ಎಂದು ಅವರ ಆಪ್ತಮೂಲಗಳು ಹೇಳಿಕೊಂಡಿವೆ.

ಕುಟುಂಬದೊಳಗಿನ ವ್ಯಾಜ್ಯ: ಧೀರೂಭಾಯ್ ಅಂಬಾನಿ 2002ರಲ್ಲಿ ನಿಧನರಾದ ಬಳಿಕ ಸಾಮ್ರಾಜ್ಯಕ್ಕಾಗಿ ಉಂಟಾದ ಕುಟುಂಬ ಕಲಹದ ಕಹಿನೆನಪು ಮುಕೇಶ್ ಅವರಲ್ಲಿ ಉಳಿದಿದೆ. ಇಂತಹ ಕಲಹ ಮುಂದುವರಿಯಬಾರದು ಎಂಬುದೇ ಉತ್ತರಾಧಿಕಾರ ಯೋಜನೆಗೆ ಪ್ರೇರಣೆ.

ವಾಲ್ಟನ್ ಕುಟುಂಬದ ಯೋಜನೆ: ಜಗತ್ತಿನ ಅತಿದೊಡ್ಡ ಉದ್ಯಮ ವಾಲ್​ವಾರ್ಟ್ ಸ್ಥಾಪಿಸಿದ ಸ್ಯಾಮ್ ವಾಲ್ಟನ್ ತಮ್ಮ ನಿಧನಕ್ಕೆ ಮುಂಚಿತವಾಗಿ ನಾಲ್ವರು ಮಕ್ಕಳಾದ ಅಲೈಸ್, ರಾಬ್, ಜಿಮ್ ಮತ್ತು ಜಾನ್​ಗೆ ಶೇಕಡ 80ರಷ್ಟು ಹಸ್ತಾಂತರಿಸಿದ್ದರು. ವಾಲ್​ವಾರ್ಟ್​ನ ಶೇಕಡ 47 ಸಂಪತ್ತು ವಾಲ್​ವಾರ್ಟ್ ಟ್ರಸ್ಟ್ ಮತ್ತು ವಾಲ್ಟನ್ ಎಂಟರ್​ಪ್ರೖೆಸಸ್ ಎಲ್​ಎಲ್​ಸಿ ಮೂಲಕ ಕುಟುಂಬದ ಹಿಡಿತದಲ್ಲೇ ಇದೆ.

ಯಾರ್ಯಾರು ಎಲ್ಲಿದ್ದಾರೆ?

  • ಮುಕೇಶ್ ಅಂಬಾನಿ - ರಿಲಯನ್ಸ್ ಮುಖ್ಯಸ್ಥ
  • ನೀತಾ ಅಂಬಾನಿ - ರಿಲಯನ್ಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿಯಲ್ಲಿದ್ದಾರೆ. ಕ್ರೀಡೆ ಮತ್ತು ಸಮಾಜಮುಖಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
  • ಇಶಾ - ಯೇಲ್ ವಿಶ್ವವಿದ್ಯಾಲಯದ ಪದವೀಧರೆ, ಮೆಕಿನ್ಸೆ ಆಂಡ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ರಿಲಯನ್ಸ್ ಜಿಯೋ, ರಿಟೇಲ್ ಆಡಳಿತ ಮಂಡಳಿಯಲ್ಲಿದ್ದಾರೆ.
  • ಆಕಾಶ್ - ಬ್ರೌನ್ ಯೂನಿವರ್ಸಿಟಿ ಪದವೀಧರ, ರಿಲಯನ್ಸ್ ಜಿಯೋ ಮತ್ತು ರಿಟೇಲ್ ಆಡಳಿತ ಮಂಡಳಿಯಲ್ಲಿದ್ದಾರೆ. ಫ್ಯಾಮಿಲಿ ಸ್ಪೋರ್ಟ್ಸ್ ಫ್ರಾಂಚೈಸಿಗಳ ಆಡಳಿತ ನೋಡಿಕೊಳ್ಳುತ್ತಿದ್ದಾರೆ.
  • ಅನಂತ್ - ಬ್ರೌನ್ ಯೂನಿವರ್ಸಿಟಿ ಪದವೀಧರ, ಜಿಯೋ ಫ್ಲಾಟ್​ಫಾಮ್್ಸರ್ ರಿಲಯನ್ಸ್ ಒ2ಸಿ, ಸೋಲಾರ್ ಕಂಪನಿಯ ಆಡಳಿತ ಮಂಡಳಿಯಲ್ಲಿದ್ದಾರೆ. ಗುಜರಾತ್​ನಲ್ಲಿ ರಿಲಯನ್ಸ್ ಪ್ರಾಣಿಸಂಗ್ರಹಾಲಯ ಪ್ರಾಜೆಕ್ಟ್​ನ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ.
ಮುಕೇಶ್ ಅಂಬಾನಿ ಸಾಮ್ರಾಜ್ಯ
  • ಸಂಪತ್ತು - 6,99,368 ಕೋಟಿ ರೂ. ಇದು 500 ಶತಕೋಟ್ಯಧಿಪತಿಗಳ ಒಟ್ಟು ಸಂಪತ್ತಿನ 1.05%
  • 49.6 ದಶಲಕ್ಷ ಟ್ರಾಯ್ ಔನ್ಸ್ ಚಿನ್ನ ಖರೀದಿಸುವಷ್ಟು
  • 1.14 ಶತಕೋಟಿ ಬ್ಯಾರೆಲ್ ಕಚ್ಚಾ ತೈಲ ಖರೀದಿಸುವಷ್ಟು ಸಂಪತ್ತು