ಬೆಂಗಳೂರು: ಜಯನಗರ 2ನೇ ಬ್ಲಾಕ್ನಲ್ಲಿರುವ ಅಶೋಕ ಸ್ತಂಭ ಬಳಿಯ ಚಂದ್ರಸಾಗರ ಕಲ್ಯಾಣ ಮಹಲ್ನಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿದ್ದ ‘ಪ್ರಾಪರ್ಟಿ ಎಕ್ಸ್ಪೋ’ಗೆ ಭಾನುವಾರ ತೆರೆಬಿದ್ದಿದ್ದು, ಗ್ರಾಹಕರು, ಬಿಲ್ಡರ್ಗಳು, ಡೆವಲಪರ್ಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಹರ್ಷ ವ್ಯಕ್ತಪಡಿಸಿವೆ.
ನೈಜ ಮತ್ತು ಆಸಕ್ತಿ ಹೊಂದಿರುವ ನೂರಾರು ಗ್ರಾಹಕರು ಮೇಳಕ್ಕೆ ಭೇಟಿ ಕೊಟ್ಟು ನಿವೇಶನ, ವಿಲ್ಲಾ ಅಪಾರ್ಟ್ಮೆಂಟ್ ಮತ್ತು ಫಾಸ್ ಖರೀದಿಸಲು ತಮ್ಮ ಹೆಸರು ನೋಂದಾಯಿಸಿಕೊಂಡರು. ಮುಂದಿನ ದಿನಗಳಿಂದ ಪ್ರಾಜೆಕ್ಟ್ಗಳ ವೀಕ್ಷಣೆ ಆರಂಭವಾಗಲಿದೆ.
ತಾವರೆಕೆರೆ, ಅಂಜನಾಪುರ, ಗುಬ್ಬಲಾಳ, ಕೆಂಗೇರಿ, ದೊಡ್ಡ ಆಲದ ಮರ, ತುಮಕೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಬಿಡದಿ, ರಾಮನಗರ, ನೆಲಮಂಗಲ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆ ಸೇರಿ ಪ್ರಮುಖ ಸ್ಥಳಗಳಲ್ಲಿನ ಪ್ರಾಜೆಕ್ಟ್ಗಳ ಕುರಿತು ಆಸಕ್ತರು ಮಾಹಿತಿ ಪಡೆದರು. ಕೆಲವರು ಅಪಾರ್ಟ್ಮೆಂಟ್ ಖರೀದಿಗೆ ಆಸಕ್ತಿ ತೋರಿದರೆ, ಇನ್ನೂ ಕೆಲವರು ನಿವೇಶನಗಳ ಮೇಲೆ ಹೂಡಿಕೆಗೆ ಗಮನಹರಿಸಿದರು. ನಿವೇಶನಕ್ಕೆ ಪರ್ಯಾಯವಾಗಿ ಫಾರ್ಮ್ಲ್ಯಾಂಡ್ ಮೇಲೆ ಹೂಡಿಕೆಗೆ ಹಲವರು ಮುಂದಾಗಿದ್ದಾರೆ.
ಕನಕಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ದೊಡ್ಡಬಳ್ಳಾಪುರ ಮತ್ತು ಆನೇಕಲ್ ಸೇರಿ ನಗರದ ಹೊರವಲಯದಲ್ಲಿ ಫಾರ್ಮ್ ಹೌಸ್ ಕಟ್ಟಿಕೊಳ್ಳಬೇಕೆಂಬ ಕನಸು ಕಟ್ಟಿಕೊಂಡು ಬಂದಿದ್ದವರಿಗೆ ಎಕ್ಸ್ಪೋ ಹೊಸ ದೃಷ್ಟಿಕೋನವನ್ನು ನೀಡುವಲ್ಲಿ ಯಶಸ್ವಿಯಾಯಿತು.
‘ಪ್ರಾಪರ್ಟಿ ಜ್ಞಾನ’ಕ್ಕೆ ವೇದಿಕೆ
ನೂರಾರು ಜನರಿಗೆ ಪ್ರಾಪರ್ಟಿ ಕುರಿತ ಜ್ಞಾನಕ್ಕೆ ಎಕ್ಸ್ಪೋ ವೇದಿಕೆಯಾಯಿತು. ನಿವೇಶನ ಖರೀದಿ, ಫಾರ್ಮ್ಹೌಸ್, ಯಾವ ರೀತಿಯಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಲಾಭವಾಗಲಿದೆ ಎಂಬ ಮಾಹಿತಿಯನ್ನು ಜನರು ಪಡೆದರು. ಇಲ್ಲಿ ಬಂದಿದ್ದರಿಂದ ಸಾಕಷ್ಟು ರೀತಿಯಲ್ಲಿ ಮಾಹಿತಿ ದೊರೆಯಿತು. ಕಂದಾಯ ಜಮೀನು, ಅಭಿವೃದ್ಧಿಪಡಿಸಿದ ನಿವೇಶನಗಳು, ಪ್ರಾಧಿಕಾರಗಳಿಂದ ದೊರೆಯುವ ನಿವೇಶನಗಳ ಸಂಪೂರ್ಣ ಮಾಹಿತಿ ದೊರೆಯಿತು ಎಂದು ಮೇಳಕ್ಕೆ ಭೇಟಿ ನೀಡಿದವರು ಹರ್ಷ ವ್ಯಕ್ತಪಡಿಸಿದರು.
ಅದೃಷ್ಟಶಾಲಿಗಳಿಗೆ ಚಿನ್ನದ ನಾಣ್ಯ
ಎಕ್ಸ್ಪೋಗೆ ಬಂದಿದ್ದ ಗ್ರಾಹಕರ ಪೈಕಿ ‘ಬೆನಕ ಗೋಲ್ಡ್ ಕಂಪನಿ’ಯು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಚಿನ್ನದ ನಾಣ್ಯ ವಿತರಿಸಿತು. ಮೇಳಕ್ಕೆ ಬಂದು ಚಿನ್ನ ಪಡೆದ ಗ್ರಾಹಕರು ಸಖತ್ ಖುಷಿಗೊಂಡರು. ನಾವು ಇಂತಹ ಆರ್ ನಿರೀಕ್ಷಿಸಿರಲಿಲ್ಲ. ಚಿನ್ನದ ನಾಣ್ಯ ದೊರೆಯುವ ಮೂಲಕ ನಮ್ಮನ್ನು ‘ಲಕ್ಕಿ’ಯನ್ನಾಗಿಸಿದೆ ಎಂದು ವಿಜೇತರು ಸಂತಸ ವ್ಯಕ್ತಪಡಿಸಿದರು.
ನೆನಪಿನ ಕಾಣಿಕೆ
ಮೇಳದಲ್ಲಿ ಪಾಲ್ಗೊಂಡಿದ್ದ ಎಲ್ಲ ಮಳಿಗೆ ಮಾಲೀಕರಿಗೆ ‘ವಿಜಯವಾಣಿ’ ವತಿಯಿಂದ ನೆನಪಿನ ಕಾಣಿಕೆ ನೀಡಿಲಾಯಿತು. ಈ ಸಂದರ್ಭದಲ್ಲಿ ವಿವಿಧ ರಿಯಲ್ ಎಸ್ಟೇಟ್ ಮಾಲೀಕರು ಎಕ್ಸ್ಪೋ ಆಯೋಜಿಸುವ ಮೂಲಕ ವೇದಿಕೆ ಕಲ್ಪಿಸಿದಕ್ಕಾಗಿ ಪತ್ರಿಕೆಗೆ ಧನ್ಯವಾದ ಅರ್ಪಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ಮೇಳಗಳನ್ನು ಆಯೋಜಿಸುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸುವಂತೆಯೂ ಮನವಿ ಮಾಡಿದರು.