ನ್ಯೂಸ್

ಲೇಡಿ ಕಾನ್ಸ್​ಟೆಬಲ್​ ಜತೆ ಸಬ್​ ಇನ್ಸ್​ಪೆಕ್ಟರ್​ ಲವ್ವಿಡವ್ವಿ! ಪತ್ನಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಎಸ್​ಐ | Affairs

Affairs : ಲೇಡಿ ಕಾನ್ಸ್​ಟೆಬಲ್​ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್​ ಇನ್ಸ್​ಪೆಕ್ಟರ್​, ಪತ್ನಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದಿದೆ. ಎಸ್​​ಐ-ಕಾನ್ಸ್​ಟೆಬಲ್​ ನಡುವಿನ ಲವ್ವಿಡವ್ವಿ​ ಆಡಿಯೋ ವೈರಲ್​ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್​​ ಮೂಲಗಳ ಪ್ರಕಾರ, ಮಹೇಂದರ್ ಎಂಬುವರು ನಲ್ಗೊಂಡ ಜಿಲ್ಲೆಯ ಟಾಸ್ಕ್ ಫೋರ್ಸ್‌ನಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಅಬಕಾರಿ ಕಾನ್ಸ್​ಟೆಬಲ್​ ವಸಂತ ಎಂಬುವವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಪತ್ನಿ ಜ್ಯೋತಿ ಮಹೇಂದರ್ ಅವರನ್ನು ರೆಡ್​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ತನ್ನ ಗಂಡನ ತಂಟೆಗೆ ಬರದಂತೆ ಕಾನ್ಸ್​ಟೆಬಲ್​ ವಸಂತಳಿಗೆ ಜ್ಯೋತಿ ಎಚ್ಚರಿಕೆ ನೀಡಿದ್ದರು. ಆದರೆ, ಎಚ್ಚರಿಕೆಗೆ ಕ್ಯಾರೆ ಎನ್ನದ ಇಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದರ ನಡುವೆ ಇತ್ತೀಚೆಗಷ್ಟೇ ಇಬ್ಬರ ಕಾಲ್ ರೆಕಾರ್ಡಿಂಗ್ ಕೂಡ ವೈರಲ್ ಆಗಿದೆ. ಇನ್ನು ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಜ್ಯೋತಿ ತನ್ನ ಪತಿಯ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನನ್ನ ಪತಿ ಮಹೇಂದರ್​, ವಸಂತ ಎಂಬುವವರೊಂದಿಗೆ ಐದಾರು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದು, ಅಂದಿನಿಂದ ನನ್ನ ಕೊಲೆಗೆ ಪ್ರಯತ್ನ ನಡೆಯುತ್ತಿದೆ. ನನ್ನ ಗಂಡ ಸರ್ವೀಸ್ ರಿವಾಲ್ವರ್‌ನಿಂದ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ಮಹೇಂದರ್ ಅವರನ್ನು ಸೇವೆಯಿಂದ ಶಾಶ್ವತವಾಗಿ ತೆಗೆದು ಹಾಕಬೇಕು. ಇಲ್ಲವಾದಲ್ಲಿ ನನಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಜ್ಯೋತಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. (ಏಜೆನ್ಸೀಸ್​)