ಭೂಪಾಲ್: ಮಾತನಾಡುವ ನೆಪದಲ್ಲಿ ರಸ್ತೆ ಮಧ್ಯೆಯೇ ಶಿಕ್ಷಕರಿಗೆ ವಿದ್ಯಾರ್ಥಿಗಳು ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜೌರಾದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ಶಿಕ್ಷಕನನ್ನು ಗಿರ್ವಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಜೌರಾ ಪ್ರದೇಶದಲ್ಲಿ ಕೋಚಿಂಗ್ ಸೆಂಟರ್ನ್ನು ನಡೆಸುತ್ತಿದ್ದಾನೆ. ವಿದ್ಯಾರ್ಥಿಗಳಿರಿಬ್ಬರು ಮೂರು ವರ್ಷಗಳ ಹಿಂದೆ 12ನೇ ತರಗತಿ ಪಾಸಾಗುವವರೆಗೂ ಈತನ ಕೋಚಿಂಗ್ ಸೆಂಟರ್ನಲ್ಲಿ ಓದಿದ್ದರು.
ಇದನ್ನೂ ಓದಿ: ವರ್ಷದ ಹಿಂದೆ ಮದುವೆಯಾಗಿದ್ದ ಯುವತಿ ಸಾವಿಗೆ ಶರಣು
ಆ ಸಂದರ್ಭದಲ್ಲಿ ಸಿಂಗ್, ವಿದ್ಯಾರ್ಥಿಗಳಿಗೆ ಸಹಾಯವನ್ನು ಮಾಡಿದ್ದರು. ಮೂರು ವರ್ಷಗಳಿಂದ ಬಾಕಿ ಇರುವ ಶುಲ್ಕವನ್ನು ಪಾವತಿಸುವಂತೆ ಸಿಂಗ್ ಹಲವಾರು ಸಂದರ್ಭಗಳಲ್ಲಿ ಇಬ್ಬರಿಗೂ ಕೇಳಿದ್ದರು. ಇದರಿಂದ ಕುಪಿತಗೊಂಡಿದ್ದ ವಿದ್ಯಾರ್ಥಿಗಳು ಹಲ್ಲೆ ನಡೆಸಲು ನಿರ್ಧರಿಸಿದ್ದರು.
ಯೋಜನೆಯಂತೆ ಇಬ್ಬರು ಗಾಡಿ ಮೇಲಿ ಬಂದು ಶಿಕ್ಷಕನನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕ ಹೊರ ಬಂದು ಇಬ್ಬರ ಜೊತೆ ಮಾತನಾಡಲು ಶುರು ಮಾಡಿದ್ದಾನೆ. ಈ ನಡುವೆ ಹಿಂದೆ ಕುಳಿತಿದ್ದವನು ಕೂಡಲೇ ಪಿಸ್ತೂಲ್ನ್ನು ಹೊರತೆಗೆದು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕೂಡಲೇ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ. ಘಟನೆ ಕುರಿತು ಮಾತನಾಡಿರುವ ಪೊಲೀಸ್ರು, ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)