ನ್ಯೂಸ್

VIDEO| ರೀಲ್ಸ್​ಗಾಗಿ ಚಲಿಸುವ ರೈಲಿನ ಮೇಲೆ ಯೋಗಾಭ್ಯಾಸ ಮಾಡಿ ಜೈಲು ಸೇರಿದರು

ಲಖನೌ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯುವಕರಿಬ್ಬರು ಚಲಿಸುವ ಗೂಡ್ಸ್​ ರೈಲಿನ ಮೇಲೆ ಯೋಗಾಭ್ಯಾಸ ಮಾಡಿ ಪೊಲೀಸರ ಅತಿಥಿಗಳಾಗಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ನೊಯ್ಡಾ ರೈಲ್ವೆ ಪೊಲೀಸರು 22 ಹಾಗೂ 19 ವರ್ಷದ ಯುವಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ಧಾರೆ. ಬಂಧಿತರು ನೊಯ್ಡಾ ಬಳಿ ಇರುವ ಜಾರ್ಚಾದ ನಿವಾಸಿಗಳೆಂದು ತಿಳಿದು ಬಂದಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ಚಲಿಸುವ ಗೂಡ್ಸ್​ ರೈಲಿನ ಮೇಲೆ ತಮ್ಮ ದೇಹದಾರ್ಢ್ಯವನ್ನು ಪ್ರದರ್ಶಿಸುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಯುವಕನೋರ್ವ ನೀರಿಗೆ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ರೀಲ್ಸ್​ಗಾಗಿ ಹುಚ್ಚಾಟ

ಪ್ರಕರಣದ ಕುರಿತು ಪೊಲೀಸ್​ ಅಧಿಕಾರಿ ಒಬ್ಬರು ಯುವಕರಿಬ್ಬರು ಜೂನ್​ 21 ರಂದು ಚಲಿಸುವ ಗೂಡ್ಸ್​ ರೈಲಿನ ಮೇಲೆ ರೀಲ್ಸ್​ಗಾಗಿ ಯೋಗಾಭ್ಯಾಸವನ್ನು ಮಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿ ಅಪ್ಲೋಡ್​ ಮಾಡಿದ್ದರು. ಈ ಕುರಿತು ನಮಗೆ ದೂರುಗಳು ದಾಖಲಾದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ತಾವು ಮಾಡುವ ಯೋಗಾಭ್ಯಾಸ ಹೆಚ್ಚಿನ ಜನಪ್ರಿಯತೆ ಪಡೆಯಲೆಂದು ಈ ರೀತಿ ಮಾಡಿದ್ದಾಗಿ ಯುವಕರಿಬ್ಬರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ಧಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ಧಾರೆ.