ನ್ಯೂಸ್

ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಬರೆಯಬಹುದು ಇನ್ನು..

shastrimath

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮೇನ್)ಗಳನ್ನು ಆದಷ್ಟು ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸಿದ್ದು, ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಗುರುವಾರ ಹೇಳಿದ್ದಾರೆ.

ಪರೀಕ್ಷೆಗಳ ಆಧಾರದಲ್ಲಿ ರಾಜ್ಯ ಇಂಜಿನಿಯರಿಂಗ್ ಕಾಲೇಜ್​ಗಳಿಗೆ ಪ್ರವೇಶ ನಿರ್ಧರಿಸುವ ಕಡೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಲಾಗುವುದು. ಜೆಇಇ ಮೇನ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯಗಳ ರಾಜ್ಯಭಾಷೆಯನ್ನು ಕೂಡ ಇದು ಒಳಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಪೋಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)