ಟ್ಯೂಷನ್‌ಗೆ ಗೈರಾಗಿ ಗರಬಾ ಆಡಲು ಹೋದ ವಿದ್ಯಾರ್ಥಿ 
ನ್ಯೂಸ್

Garba Viral Video: ಟ್ಯೂಷನ್‌ಗೆ ಚಕ್ಕರ್ ಹೊಡೆದು ಗರಬಾ ಆಡೋಕೆ ಹೋದ ವಿದ್ಯಾರ್ಥಿ: ಟೀಚರ್ ಕೈಗೆ ಸಿಕ್ಕಿಬಿದ್ದ ಸ್ಟೂಡೆಂಟ್

ಟ್ಯೂಷನ್‌ಗೆ ಚಕ್ಕರ್ ಹೊಡೆದು ಗರಬಾ ಆಡಲು ಹೋದ ವಿದ್ಯಾರ್ಥಿ ಅಲ್ಲೇ ಟೀಚರ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಫನ್ನಿ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Student skips tuition: ಟ್ಯೂಷನ್‌ಗೆ ಹೋಗದೆ ಗರಬಾ ಆಡೋಕೆ ಹೋದ ವಿದ್ಯಾರ್ಥಿಯೊಬ್ಬ ಅಲ್ಲೇ ತನ್ನ ಟೀಚರ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಚಾನಕ್ ಎದುರಾದ ಟೀಚರ್‌ ನೋಡಿ ವಿದ್ಯಾರ್ಥಿ ಶಾಕ್ ಆಗಿದ್ದರೆ, ಈ ಫನ್ನಿ ಸನ್ನಿವೇಶದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಳ್ಳಲಾಗಿದೆ. ಟ್ಯೂಷನ್ ಕ್ಲಾಸ್‌ಗೆ ಹೋಗಬೇಕಿದ್ದ ವಿದ್ಯಾರ್ಥಿ, ಕ್ಲಾಸ್‌ಗೆ ಚಕ್ಕರ್ ಹೊಡೆದು ಗರಬಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಗರಬಾ ಆಡುವಾಗ ಟ್ಯೂಷನ್ ಟೀಚರ್ ಪ್ರತ್ಯಕ್ಷ

ಇನ್ನು, ಗರಬಾ ಡ್ಯಾನ್ಸ್‌ ಮಾಡುತ್ತಿದ್ದಾಗಲೇ ವಿದ್ಯಾರ್ಥಿಯ ಟ್ಯೂಷನ್ ಟೀಚರ್ ಕೂಡ ಅಲ್ಲಿಗೆ ಬಂದಿದ್ದಾರೆ. ಟೀಚರ್ ಮತ್ತು ವಿದ್ಯಾರ್ಥಿ ಮುಖಾಮುಖಿಯಾದ ಈ ಫನ್ನಿ ಸನ್ನಿವೇಶ ಈಗ ನೆಟ್ಟಿಗರ ಗಮನ ಸೆಳೆದಿದೆ. ವಿದ್ಯಾರ್ಥಿ ಕ್ಲಾಸ್‌ಗೆ ಗೈರಾಗಿದ್ದಕ್ಕೆ ಏನು ಕಾರಣ ಹೇಳಬಹುದು ಎಂದು ತಮಾಷೆಯ ಅಡಿಬರಹದೊಂದಿಗೆ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಬೇರೆ ಸೋಷಿಯಲ್ ಮೀಡಿಯಾ ಪೇಜ್‌ಗಳೂ ಹಂಚಿಕೊಂಡಿವೆ.

ನೆಟ್ಟಿಗರು ಹೇಳಿದ್ದೇನು?

ವಿಡಿಯೋ ನೋಡಿದ ನೆಟ್ಟಿಗರು ಫುಲ್ ಕಾಮೆಂಟ್ ಮಾಡುತ್ತಿದ್ದಾರೆ. ‘ಇಬ್ಬರೂ ಒಬ್ಬರನ್ನೊಬ್ಬರು ನೋಡುವ ರೀತಿ ಸಖತ್ ಇದೆ’ ಎಂದು ಒಬ್ಬರು ಬರೆದಿದ್ದಾರೆ. ‘ಆದರೆ ಟೀಚರ್ ಅಲ್ಲೇನು ಮಾಡ್ತಿದ್ದಾರೆ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಟೀಚರ್ ಮತ್ತು ವಿದ್ಯಾರ್ಥಿಯ ನಡುವಿನ ಈ ಅನಿರೀಕ್ಷಿತ ಭೇಟಿಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ; ಕೆರೆಯಂತಾದ ಪಣತ್ತೂರು ಅಂಡರ್‌ಪಾಸ್! ಹೈರಾಣಾದ ವಾಹನ ಸವಾರರು | Bangalore Rain

ಒಟ್ಟಿನಲ್ಲಿ, ಟ್ಯೂಷನ್‌ ಬಂಕ್​ ಮಾಡಿ ಗರಬಾ ಆಡೋಕೆ ಹೋದ ವಿದ್ಯಾರ್ಥಿಗೆ ಅಲ್ಲೇ ಟೀಚರ್ ಸಿಕ್ಕಿಬಿದ್ದ ಪ್ರಸಂಗ ಸೋಷಿಯಲ್ ಮೀಡಿಯಾದಲ್ಲಿ ನಗೆಯ ಅಲೆ ಎಬ್ಬಿಸಿದೆ.