Student Dies: 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಒಂದು ಸಣ್ಣ ಕಾರಣಕ್ಕೆ ಮನನೊಂದು ನೇಣಿಗೆ ಶರಣಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಜಲಾವೃತ ರಸ್ತೆಯಲ್ಲಿ ವೀವ್ಸ್ಗಾಗಿ ಯುವತಿಯ ಹುಚ್ಚಾಟ: ವಾಹನ ಸವಾರರಿಗೆ ಕಿರಿಕಿರಿ, ಭಾರೀ ಟೀಕೆ! Social Media Influencer
ಮೃತ ಬಾಲಕಿಯನ್ನು ಕಿರಣ್ಮಯಿ (15) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಪೋಷಕರು ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ನಗರ ಪೊಲೀಸರಿಂದ ತಿಳಿದುಬಂದಿದೆ. ಇತ್ತೀಚೆಗಷ್ಟೇ 10ನೇ ತರಗತಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದ ಈಕೆ, ತನ್ನ ತಂಗಿಯರಿಂದ ನಿರಂತರವಾಗಿ ಯಾವುದೋ ವಿಷಯಕ್ಕೆ ಟೀಕೆ, ವ್ಯಂಗ್ಯಗಳನ್ನು ಎದುರಿಸುತ್ತಿದ್ದಳು ಎನ್ನಲಾಗಿದೆ.
ಮನೆಗೆ ಬಂದಿದ್ದ ತಂಗಿಯರು, ಬಾಲಕಿಯನ್ನು ಲೇವಡಿ ಮಾಡಿದ್ದಾರೆ. ಈ ವಿಷಯದಿಂದ ತೀರ ಮನನೊಂದ ಕಿರಣ್ಮಯಿ, ಮನೆಯ ಸ್ನಾನಗೃಹದಲ್ಲಿ ಒಳಗಿನಿಂದ ಲಾಕ್ ಮಾಡಿ, ನೇಣಿಗೆ ಶರಣಾಗಿದ್ದಾಳೆ. ಈ ವೇಳೆಗೆ ಮನೆಗೆ ಬಂದ ಆಕೆಯ ಪೋಷಕರಿಗೆ ಮಗಳು ಕಾಣುತ್ತಿಲ್ಲ ಎಂಬ ಅಜ್ಜನ ಕೂಗು ಕೇಳಿಸಿದೆ. ತಕ್ಷಣವೇ ಮನೆಯ ಸುತ್ತಮುತ್ತಲು ಹುಡುಕಾಡಿದ ಹೆತ್ತವರು, ಕಡೆಗೆ ಒಳಗಿನಿಂದ ಲಾಕ್ ಆಗಿದ್ದ ಸ್ನಾನಗೃಹದ ಬಾಗಿಲು ಒಡೆದು ನೋಡಿದಾಗ ಕಿರಣ್ಮಯಿ ಮೃತಪಟ್ಟಿರುವುದು ಕಂಡುಬಂದಿದೆ.
ಇದನ್ನೂ ಓದಿ: ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲೇ ಮುರಿದುಬಿತ್ತು ವರನ ಮದುವೆ ಕನಸು! ವಧು ಹೇಳಿದ ಮಾತು ಕೇಳಿ…. | Marriage Broken
ಸ್ಥಳಕ್ಕೆ ಧಾವಿಸಿದ ಕಂಚರಪಾಲಂ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗಳ ಅಗಲಿಕೆ ಪೋಷಕರನ್ನು ಕಂಗಾಲಾಗಿಸಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).