ನವದೆಹಲಿ: ಶ್ರದ್ಧಾ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ 'ಸ್ತ್ರೀ- 2' ಚಿತ್ರ ವಿಶ್ವದಾದ್ಯಂತ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, 300 ಕೋಟಿ ರೂ. ಕ್ಲಬ್‌ಗೆ ಸೇರಲು ಸಿದ್ಧವಾಗಿದೆ.
ಇದನ್ನೂ ಓದಿ: ‘ಮೊದಲು ನಿಮ್ಮ ಹೆಂಡ್ತಿಗೆ ಕ್ಷಮೆಯಾಚಿಸಿ’, ವೈದ್ಯೆ ಅತ್ಯಾಚಾರ ಪ್ರಕರಣದ ಪೋಸ್ಟ್ ಮಾಡಿದ್ದಕ್ಕೆ ಪಾಕ್ ನಟನಿಗೆ ಟ್ರೋಲ್!
ಕಲ್ಕಿ 2898 ಎಡಿಯಂತೆ ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರವೂ ಸಹ ಹೊಸ ದಾಖಲೆಗಳನ್ನು ಮಾಡುತ್ತಿದೆ. ಮೊದಲ ದಿನವೇ 76 ಕೋಟಿ ರೂ.ಗಳ ಭರ್ಜರಿ ಓಪನಿಂಗ್ ಪಡೆದಿರುವ ಈ ಚಿತ್ರ 4 ದಿನದಲ್ಲಿ ದೇಶಿಯ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ.ಗಳ ಗಡಿ ದಾಟಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಹೊರರಾಜ್ಯಗಳಲ್ಲಿ ಚಿತ್ರದ ಪ್ರದರ್ಶನಗಳು ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.
ಸ್ತ್ರೀ 2 ಬಿಡುಗಡೆಯಾದ ದಿನದಿಂದ ಬೆಳಗ್ಗಿನಿಂದ ಸಂಜೆ ಮತ್ತು ರಾತ್ರಿಯವರೆಗೆ ಬಹುತೇಕ ಎಲ್ಲಾ ಶೋಗಳನ್ನು ಜನರು ಮುಂಗಡವಾಗಿ ಬುಕ್ ಮಾಡಿದ್ದಾರೆ. ವಿಶ್ವದಾದ್ಯಂತ ಚಿತ್ರವು 283 ಕೋಟಿ ರೂಪಾಯಿ ಗಳಿಕೆ ಕಂಡಿದೆ. 300 ಕೋಟಿ ಕ್ಲಬ್‌ಗೆ ಸೇರಲು ಚಿತ್ರವು ಕೇವಲ 18 ಕೋಟಿ ರೂಪಾಯಿಗಳನ್ನು ಗಳಿಸಬೇಕಾಗಿದೆ.
ಇನ್ನು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿದ್ದ ಸ್ಟ್ರೀ 2, ನಾಲ್ಕು ದಿನಗಳಲ್ಲಿ ಸಾಗರೋತ್ತರ ಮಾರುಕಟ್ಟೆಯಲ್ಲಿ ಒಟ್ಟು 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸ್ತ್ರೀ 2 ತನ್ನ ಮೊದಲ ದಿನವೇ ಅನೇಕ ದೊಡ್ಡ ಚಿತ್ರಗಳ ದಾಖಲೆಗಳನ್ನು ಮುರಿದಿದೆ ಎನ್ನಲಾಗುತ್ತಿದೆ.