ಹೈದರಾಬಾದ್: ಮಹಿಳೆಯೊಬ್ಬಳು ಮತ್ಸ್ಯಕನ್ಯೆ ರೂಪದ ವಿಚಿತ್ರ ಮಗುವಿಗೆ ಜನ್ಮ ನೀಡಿರುವ ಘಟನೆ ತೆಲಂಗಾಣ ರಾಜಧಾನಿ ಹೈದರಬಾದ್ನಿಂದ ವರದಿಯಾಗಿದೆ.
ಸಂಗಾರೆಡ್ಡಿ ಮೂಲದ ತೆಹ್ಸಿನ್ ಸುಲ್ತಾನಾ (20) ಎಂಬಾಕೆ ಹೆರಿಗೆಗೆಂದು ಮಾರ್ಚ್ 5ರಂದು ಹೈದರಾಬಾದ್ನ ಪೆಟ್ಲಬುರುಜು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 10ರಂದು ರಾತ್ರಿ 7 ಗಂಟೆಗೆ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಕಾಲುಗಳು ಒಂದಕ್ಕೊಂದು ಅಂಟಿಕೊಂಡು ಮತ್ಸ್ಯಕನ್ಯೆ ರೂಪದಲ್ಲಿದೆ.
ವಿಚಿತ್ರ ಮಗು ಜನಿಸಿದ ಬೆನ್ನಲ್ಲೇ ಆಸ್ಪತ್ರೆಯ ಎಲ್ಲ ವೈದ್ಯರು ಮಗು ಮತ್ತು ಮಹಿಳೆಯನ್ನು ಪರೀಕ್ಷಿಸಿದರು. ಆದಾಗ್ಯ ಮಗು ಹುಟ್ಟಿದ ದಿನವೇ ರಾತ್ರಿ 10 ಗಂಟೆಗೆ ಕೊನೆಯುಸಿರೆಳೆದಿದೆ.
ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು ಇಂತಹ ಜನನ ತುಂಬಾ ವಿರಳ. ಅನುವಂಶಿಕ ದೋಷದಿಂದಾಗಿ ಇಂತಹ ಜನನಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)