ನ್ಯೂಸ್

Stock Market: ವಾರಾಂತ್ಯದಲ್ಲಿ ಸೆನ್ಸೆಕ್ಸ್​ ಇಳಿಕೆ, ನಿಫ್ಟಿ ಏರಿಕೆ; ಲಾಭದಲ್ಲಿರುವ ಷೇರುಗಳಿವು..

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 5ನೇ ಮತ್ತು ಕೊನೆಯ ದಿನವಾದ ಶುಕ್ರವಾರ(ಸೆ.3) ಏರಿಕೆ ಮತ್ತು ಇಳಿಕೆ ಕಂಡಿವೆ.

ಸೆನ್ಸೆಕ್ಸ್ 7 ಅಂಕಗಳ ಕುಸಿತದೊಂದಿಗೆ 80,710.76 ಕ್ಕೆ ತಲುಪಿದರೆ, ನಿಫ್ಟಿ 50 7 ಅಂಕಗಳ ಏರಿಕೆಯೊಂದಿಗೆ 24,741 ಕ್ಕೆ ತಲುಪಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.10 ರಷ್ಟು ಕುಸಿದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ. 0.09 ರಷ್ಟು ಏರಿಕೆ ಕಂಡಿತು.

ಶುಕ್ರವಾರ ನಿಫ್ಟಿ 50 ಸೂಚ್ಯಂಕದಲ್ಲಿ ಐಷರ್ ಮೋಟಾರ್ಸ್ (ಶೇ 2.41 ರಷ್ಟು ಏರಿಕೆ), ಮಹೀಂದ್ರಾ & ಮಹೀಂದ್ರಾ (ಶೇ 2.34 ರಷ್ಟು ಏರಿಕೆ), ಮತ್ತು ಶ್ರೀರಾಮ್ ಫೈನಾನ್ಸ್ (ಶೇ 1.68 ರಷ್ಟು ಏರಿಕೆ) ಷೇರುಗಳು ಹೆಚ್ಚು ಲಾಭ ಗಳಿಸಿದವು.

ಇತ್ತ ಬಿಎಸ್‌ಇ ಸೆನ್ಸೆಕ್ಸ್​ನಲ್ಲಿ ಶೇ 15 ಕ್ಕಿಂತ ಹೆಚ್ಚು ಜಿಗಿದ 11 ಷೇರುಗಳಲ್ಲಿ ಬರಾಕ್ ವ್ಯಾಲಿ ಸಿಮೆಂಟ್ಸ್, ವೆನ್ಲಾನ್ ಎಂಟರ್‌ಪ್ರೈಸಸ್, ಜೆಐಟಿಎಫ್ ಇನ್ಫ್ರಾಲಾಜಿಸ್ಟಿಕ್ಸ್ ಮತ್ತು ಪಿವಿಪಿ ವೆಂಚರ್ಸ್ ಸೇರಿವೆ.(ಏಜೆನ್ಸೀಸ್​)