ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ಕರೆದ ಪ್ರೊಫೆಸರ್
- ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ಕರೆದ ಪ್ರೊಫೆಸರ್
- ಬೆಂಗಳೂರಿನ ಪಿ.ಎ.ಎಸ್ ಕಾಲೇಜಿನಲ್ಲಿ ನಡೆದಿರುವ ಘಟನೆ
- ಪ್ರೊಫೆಸರ್ ವಿರುದ್ಧ ದೂರು ದಾಖಲು
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾವು ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದ ಕ್ಲಾಸ್ರೂಮ್ನ್ನು ತಲುಪಿದ್ದು, ಪ್ರೊಫೆಸರ್ ವಿದ್ಯಾರ್ಥಿಯೊಬ್ಬನಿಗೆ ಟೆರೆರಿಸ್ಟ್ ಎಂಬ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಈ ಘಟನೆ ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಪ್ರೊ. ಡಾ. ಮುರಳಿಧರ್ ದೇಶಪಾಂಡೆ ಅವರು ಅಫ್ನಾನ್ ಎಂಬ ವಿದ್ಯಾರ್ಥಿಗೆ ಟೆರೆರಿಸ್ಟ್ (Professor calls Muslim Student a Terrorist) ಎಂದು ಕರೆದಿದ್ದಾರೆ ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ಪ್ರೊ. ಡಾ. ಮುರಳಿಧರ್ ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅಫ್ನಾನ್ ಎಂಬ ವಿದ್ಯಾರ್ಥಿ, ನಾನು ಒಬ್ಬರನ್ನು ಬೇಟಿ ಮಾಡಲು ಹೋಗಬೇಕು, ನಿಮ್ಮ ಕ್ಲಾಸ್ಗೆ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದ್ದಾನೆ.
ಈ ಮಾತನ್ನು ಕೇಳಿಸಿಕೊಂಡು ಸಿಟ್ಟಿಗೆದ್ದ, ಪ್ರೊ. ಮುರಳಿಧರ್, ನಾನು ಇವತ್ತು ಶಾಂತಯುತವಾಗಿ ತರಗತಿ ನಡೆಸಲು ಬಂದರೆ ಎಲ್ಲಾ ಹಾಳು ಮಾಡಿದಿರಿ. ಈ ಮಾತನ್ನು ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ ಟೆರೆರಿಸ್ಟ್ ಎಂದು ಅಫ್ನಾನ್ ಮೇಲೆ ರೇಗಿದ್ದಾರೆ.
ಇಷ್ಟಕ್ಕೆ ಮಾತನ್ನು ನಿಲ್ಲಿಸದ ಪ್ರೊಫೆಸರ್, ನಿಮ್ಮಿಂದಲೇ ಇರಾನ್ನಲ್ಲಿ ಯುದ್ಧ ನಡೆಯುತ್ತಿದೆ. ನೋಡ್ತಾಯಿರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಮಗೆ ಸರಿಯಾದ ಪಾಠ ಕಲಿಸುತ್ತಾನೆ. ಟ್ರಂಪ್ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಾನೆ, ಗೋ ಟು ಹೆಲ್ ಎಂದು ಪ್ರೊ. ಮುರಳಿಧರ್ ಆಕ್ರೋಶ ಹೊರಹಾಕಿದ್ದಾರೆ.
ಪ್ರೊಫೆಸರ್ ಮೇಲೆ ಕಂಪ್ಲೇಂಟ್ ದಾಖಲು
ಕ್ಲಾಸ್ರೂಮಿನಲ್ಲಿ ನಡೆದ ಈ ಘಟನೆಯನ್ನು ನಿನ್ನೊಬ್ಬ ವಿದ್ಯಾರ್ಥಿ ತನ್ನ ಮೊಬೈಲ್ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ.
ಈ ಘಟನೆಯ ವಿಡಿಯೋ ಎಲ್ಲಾ ಕಡೆ ಹರಿದಾಡಿದ ನಂತರ, ವಿಶ್ವ ವಿದ್ಯಾಲಯದ ಕುಲಪತಿಗಳು ಪ್ರೊ. ಡಾ. ಮುರಳಿಧರ್ ದೇಶಪಾಂಡೆ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದು, ಆಂತರಿಕ ತನಿಖೆಯನ್ನು ನಡೆಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಈ ರೀತಿಯ ಘಟನೆ ನಮ್ಮ ವಿವಿ ಯಲ್ಲಿ ಇದುವರೆಗೆ ಎಂದಿಗೂ ನಡೆದಿಲ್ಲ, ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ,(ಏಜನ್ಸೀಸ್).