ರಾಜ್ಯ

ಅಲ್ಲಿ ದೊಡ್ಡ ಖದೀಮರೇ ತುಂಬಿದ್ದಾರೆ!...ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಸಿಎಂ ಡಿಕೆಶಿ | DK Shivakumar

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ವ್ಯಾಪಕ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ, ನೇಮಕಾತಿ ಪ್ರಾಧಿಕಾರವಾದ ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆ ತಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (CM Shivakumar) ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ವ್ಯಾಪಕ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ, ನೇಮಕಾತಿ ಪ್ರಾಧಿಕಾರವಾದ ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆ ತಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಕೆಪಿಎಸ್‌ಸಿಯಲ್ಲಿ ನಡೆದಿರುವ ನೇಮಕಾತಿ ಹಗರಣಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ ಮರುದಿನವೇ ಮುಖ್ಯಮಂತ್ರಿಗಳ ಕಡೆಯಿಂದ ಈ ಹೇಳಿಕೆ ಹೊರಬಿದ್ದಿದೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ನಾನು ಈ ಕೆಪಿಎಸ್‌ಸಿಯನ್ನೇ ಮುಚ್ಚಬೇಕು ಎಂಬ ಆಲೋಚನೆಯಲ್ಲಿದ್ದು, ಅದಕ್ಕೆ ಸಂಬಂಧಪಟ್ಟಂತೆ ಕಾನೂನಾತ್ಮಕ ಆಯಾಮಗಳ ಬಗ್ಗೆ ನಾನು ಹಲವರ ಜೊತೆ ಮಾತನಾಡುತ್ತಿದ್ದೇನೆ. ಅಧ್ಯಕ್ಷರಿಂದ ಹಿಡಿದು ಇತರರವರೆಗೆ ಅಲ್ಲಿಗೆ ಹಲವಾರು ಖದೀಮರು ಅಲ್ಲಿ ಸೆರಿಕೊಂಡಿದ್ದು, ಸದಸ್ಯರಂತು ಒಂದು ರೀತಿ ಅಂಗಡಿಗಳನ್ನೇ ತೆರೆದಿದ್ದಾರೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು.

ಇದನ್ನೂ ಓದಿ:ರಾಷ್ಟ್ರೀಯ ಗೀತೆಯ ಆಯ್ಕೆ ಸರ್ಕಾರದ ಹಕ್ಕು!… ಮನಸಾಕ್ಷಿಯ ಆಧಾರದಲ್ಲಿ ಹಾಡದಿದ್ದರೆ ಶಿಕ್ಷೆ ಆಗುತ್ತಾ...? ಸುಪ್ರೀಂ ಕೋರ್ಟ್ ಹೇಳಿದ್ದೇನು..? | Vande Mataram

ಸಾಂವಿಧಾನಿಕ ಸಂಸ್ಥೆಯೊಂದನ್ನು ಮುಚ್ಚುವುದು ಸುಲಭವಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳ ವಿಚಾರದಲ್ಲಿ ನಾವು ಯಾವ ರೀತಿಯ ಪ್ರಕ್ರಿಯೆಗಳನ್ನು ಅನುಸರಿಸಬೇಕೋ, ಕೆಪಿಎಸ್‌ಸಿ ವಿಚಾರದಲ್ಲೂ ಅಂತಹದೇ ಪ್ರಕ್ರಿಯೆಗಳಿವೆ. ನಾವು ಕಾನೂನುಬದ್ಧವಾಗಿ ಆಳವಾಗಿ ಪರಿಶೀಲಿಸಲು ಯೋಚಿಸುತ್ತಿದ್ದೇವೆ. ನಮ್ಮ ಮಕ್ಕಳ ಭವಿಷ್ಯ ನಮಗೆ ಮುಖ್ಯ ಎಂದು ಸಿಎಂ ತಿಳಿಸಿದ್ದಾರೆ. ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರವು ಕೆಪಿಎಸ್‌ಸಿ ಸದಸ್ಯರ ಸಂಖ್ಯೆಯನ್ನು 16 ರಿಂದ ಕಡಿಮೆ ಮಾಡಿದ್ದನ್ನು ಉಲ್ಲೇಖಿಸಿದ ಡಿಕೆಶಿ, ಸಾಧ್ಯವಾದಷ್ಟು ಪಾರದರ್ಶಕವಾಗಿದ್ದರೂ, ಅಲ್ಲಿ ನಂಬಿಕೆ ಇಟ್ಟಿರುವ ಜನರೇ ಕಳ್ಳತನದಲ್ಲಿ ತೊಡಗಿದ್ದಾರೆ. ಅಧಿಕಾರಿಗಳೇ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಖರ್ಗೆ ಹೇಳಿದ್ದೇನು..?

ಕೆಪಿಎಸ್​​ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿರುವ ಆದೇಶದ ಕುರಿತು ರಾಜ್ಯ ಸರ್ಕಾರದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿದೆದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ತನಿಖೆ ನಡೆಸಿರುವ ಸಿಐಡಿ ತಂಡವು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ ಹಾಗೂ ತನಿಖೆಯಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳು ಸಿಐಡಿ ನಡೆಸಿದ ತನಿಖೆಯಿಂದಲೇ ಹೊರಬಂದಿದ್ದು, ಐಎಎಸ್ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಮಧ್ಯವರ್ತಿಯನ್ನು ಇಮಿಗ್ರೇಷನ್‌ನಿಂದ ವಶಕ್ಕೆ ಪಡೆದಿದೆ ಮತ್ತು ಕೆಪಿಎಸ್‌ಸಿ ಅಧ್ಯಕ್ಷರ ಮಗಳ ನಕಲಿ ಪ್ರಮಾಣಪತ್ರ ಪ್ರಕರಣವನ್ನು ಸಿಐಡಿಗೆ ವಹಿಸಿಕೊಂಡಿದ್ದು ಸೇರಿದಂತೆ ಎಲ್ಲಾ ಪ್ರಮುಖ ಮುನ್ನಡೆ ಸಾಧಿಸಿದ್ದು ಸಿಐಡಿ ಅಧಿಕಾರಿಗಳೇ ಹೊರತು ಬೇರೆ ಯಾವುದೇ ಸಂಸ್ಥೆಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ, ತನಿಖೆ ನಡೆಯುತ್ತಿರುವ ಮಧ್ಯದಲ್ಲೇ ಹೈಕೋರ್ಟ್ ಏಕಾಏಕಿ ಎಸ್‌ಐಟಿ ರಚಿಸಿ ಏಕೆ ಆದೇಶ ನೀಡಿದೆ ಮತ್ತು ನಿರ್ದಿಷ್ಟ ಅಧಿಕಾರಿಗಳನ್ನೇ ಒಳಗೊಂಡ ತಂಡವನ್ನು ಸರ್ಕಾರಕ್ಕೆ ಏಕೆ ನಿರ್ದೇಶಿಸಿದೆ ಎಂಬುದು ತಿಳಿದಿಲ್ಲ ಹಾಗೂ ಆ ಕುರಿತು ಹೆಚ್ಚು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದಿರುವ ಖರ್ಗೆ, ಈ ಎಲ್ಲಾ ಬೆಳವಣಿಗೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಪಿಎಸ್‌ಸಿ ಮುಚ್ಚುವ ಆಲೋಚನೆಯಲ್ಲಿದ್ದೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ಅದೊಂದು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಈ ಕುರಿತು ಈಗಾಗಲೇ ಚರ್ಚೆಗಳನ್ನು ನಡೆಸಲಾಗಿದೆ. ಅವಕಾಶವಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆಪಿಎಸ್‌ಸಿ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿದ್ದು, ಆ ಮಸೂದೆಯನ್ನು ಜಾರಿಗೆ ತಂದವರು ನಾವೇ. ಆದ್ದರಿಂದ ಈ ಕುರಿತು ನಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡಬೇಕೋ ಅಥವಾ ವಿರೋಧ ಪಕ್ಷದವರ ಜೊತೆ ಸೇರಿ ನಾವೇ ಹೊಸ ವಿಧೇಯಕ ತರಬೇಕೋ ಎಂಬ ಬಗ್ಗೆ ಆಲೋಚನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತಿಮವಾಗಿ ನಮಗೆ ಯುವಕರ ಭವಿಷ್ಯವೇ ಮುಖ್ಯವಾಗಿದ್ದು, ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದರು(ಏಜೆನ್ಸೀಸ್​).