ಆರು ವರ್ಷಗಳ ಬಳಿಕ ಧಾರವಾಡಕ್ಕೆ ಮರಳಿದ ಶಾಸಕ ವಿನಯ್​ ಕುಲಕರ್ಣಿ 
ರಾಜ್ಯ

ಆರು ವರ್ಷಗಳ ನಂತರ ಧಾರವಾಡಕ್ಕೆ ಕಾಲಿಟ್ಟ ವಿನಯ್ ಕುಲಕರ್ಣಿ: ಜಿಲ್ಲೆಗೆ ಮರಳಿದ ಶಾಸಕ ಮೊದಲು ಹೋಗಿದ್ದೆಲ್ಲಿ? Vinay Kulkarni

ಪ್ರಮುಖ ಮುಖ್ಯಾಂಶಗಳು

  • ಆರು ವರ್ಷಗಳ ಬಳಿಕ ಧಾರವಾಡಕ್ಕೆ ಮರಳಿದ ಶಾಸಕ ವಿನಯ್​ ಕುಲಕರ್ಣಿ
  • ಯೋಗಿಶ್​ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಾಸಕ
  • ಹೈಕೋರ್ಟ್​ ಆದೇಶ ಅಮಾನತ್ತು, ಜಾಮೀನು ನೀಡಿದ ಹಿನ್ನಲೆ ಜಿಲ್ಲಾ ಪ್ರವೇಶ
  • ಜಿಲ್ಲೆಗೆ ಕಾಲಿಡುತ್ತಿದ್ದಂತೆ ದೇವರ, ಮಠಗಳ ದರ್ಶನಕ್ಕೆ ಮುಗಿಬಿದ್ದ ಶಾಸಕ
ಧಾರವಾಡ: ಜಿಲ್ಲಾ ಪರಿಷತ್​ ಸದಸ್ಯ ಯೋಗಿಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ವಿನಯ್​​ ಕುಲಕರ್ಣಿ (Vinay Kulkarni) ಗೆ ಹೈಕೋರ್ಟ್​ ಜಾಮೀನು ನೀಡಿದ ಹಿನ್ನಲೆ ಭರ್ತಿ ಆರು ವರ್ಷಗಳ ಬಳಿಕ ಶಾಸಕ ತಮ್ಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಯೋಗಿಶ್​ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ ಹಾಗೂ ಒಡ್ಡುವ ಸಾಧ್ಯತೆಯಿದ್ದ ಕಾರಣ ಕೆಳ ಹಂತದ ನ್ಯಾಯಾಲಯ ವಿನಯ್​ ಕುಲಕರ್ಣಿ ತಮ್ಮ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಪ್ರವೇಶಿಸಿದಂತೆ ನಿಷೇಧ ಹೇರಿತ್ತು.
ನಂತರದ ದಿನದಲ್ಲಿ ಶಾಸಕರ ನ್ಯಾಯಾಲಯವು, ವಿನಯ್​ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯನ್ನೂ ಪ್ರಕಟಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್​ ಮೆಟ್ಟಿಲೇರಿದ ಶಾಸಕರಿಗೆ ಬಿಗ್​ ರಿಲೀಫ್​ ದೊರೆತಿದ್ದು, ಶಾಸಕರ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಮಾನತ್ತಿನಲ್ಲಿಟ್ಟು, ಜಾಮೀನನ್ನು ಹೈಕೋರ್ಟ್​ ನ್ಯಾಯಪೀಠ ನೀಡಿದ ಹಿನ್ನಲೆ ಇಂದು ವಿನಯ್​ ಕುಲಕರ್ಣಿ ಧಾರವಾಡಕ್ಕೆ ಪ್ರವೇಶಿಸುವಂತಾಗಿದೆ.

ಶಾಸಕರಿಂದ ಟೆಂಪಲ್​ ರನ್​!

ಆರು ವರ್ಷಗಳ ಬಳಿಕ ಸ್ವಕ್ಷೇತ್ರಕ್ಕೆ ಕಾಲಿಟ್ಟಿರುವ ಶಾಸಕ ವಿನಯ್​ ಕುಲಕರ್ಣಿ, ಮನೆ ಅಥವಾ ಜನರೊಂದಿಗೆ ಮಾತುಕತೆ ಆರಂಭಿಸುವ ಮೊದಲು, ದೇವರ, ಮಠಾಧೀಶರ ಆರ್ಶೀವಾದ ಪಡೆಯಲು ಮುಂದಾಗಿದ್ದಾರೆ.

ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿನಯ್​ ಕುಲಕರ್ಣಿ, ಮೊದಲಿಗೆ ಸವದತ್ತಿಯ ರೇಣುಕಾ ಯಲ್ಲಮ್ಮನ ಗುಡಿ, ನಂತರ ಮುರುಘಾಮಠ, ಆಮೇಲೆ ಖ್ಯಾತ ಸಿದ್ಧಾರೂಢ ಮಠದಲ್ಲಿ ಶ್ರೀಗಳ ಆರ್ಶೀವಾದ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಂತರ ಮನೆಗೆ ತೆರಳಿ, ಆಮೇಲೆ ತಮ್ಮ ಅಭಿಮಾನಿಗಳು ಹಾಗೂ ಮತದಾರ ಬಾಂಧವರನ್ನು ಬೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.


ಜೈಲಿನಿಂದಲೇ ಚುನಾವಣೆ ಗೆದ್ದಿದ್ದ ಕುಲಕರ್ಣಿ!

2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್​ ಕುಲಕರ್ಣಿ, ಆ ಸಂದರ್ಭದಲ್ಲಿ ಜೈಲಿನಲ್ಲಿದ್ದರೂ ಕೂಡ ಬಿಜೆಪಿಯ ಅಮೃತ್​ ದೇಸಾಯಿ ವಿರುದ್ಧ ಭರ್ತಿ 18 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದರು. ಈ ಮೂಲಕ ತಾವು ಕ್ಷೇತ್ರದಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಮತದಾರರ ಬೆಂಬಲ ತಮ್ಮ ಮೇಲಿದೆ ಎಂದು ಸಾಭೀತು ಪಡಿಸಿದ್ದರು, (ಏಜನ್ಸೀಸ್​).