ಸರ್ಕಾರ ರೆಡಿಯಿದ್ರೆ ಅದೇ ಮೆಟ್ಟಿಲಲ್ಲಿ ಚರ್ಚೆಗೆ ನಾವು ಸಿದ್ಧ: 'ನೈಸ್'​ ವಿವಾದದಲ್ಲಿ ಸಿಎಂ ಡಿಕೆಶಿಗೆ ಸವಾಲೆಸೆದ ಎಚ್​ಡಿಕೆ | HDK vs DKS  
ರಾಜ್ಯ

ರೆಡಿಯಿದ್ರೆ ಅದೇ ಮೆಟ್ಟಿಲಲ್ಲಿ ಚರ್ಚೆಗೆ ನಾವು ಸಿದ್ಧ: 'ನೈಸ್'​ ವಿವಾದದಲ್ಲಿ ಸಿಎಂಗೆ ಸವಾಲೆಸೆದ ಎಚ್​ಡಿಕೆ | HDK vs DKS

ರಾಜ್ಯದಲ್ಲಿ ಯೋಜನೆಗಳ‌ ಹೆಸರಿನಲ್ಲಿ ರೈತರ ಜತೆ ಚೆಲ್ಲಾಟ ಆಡುತ್ತಿರುವ ರಾಜ್ಯ ಸರ್ಕಾರ ಗುಲಾಮಗಿರಿಯಲ್ಲಿ ಕೆಲಸ ಮಾಡುತ್ತಿದೆ. ಈ ಮಾಹಿತಿಯನ್ನು ನಾಡಿನ ಜನರ ಮುಂದೆ ದಾಖಲೆ ಸಮೇತ ಮುಂದಿಡುತ್ತೇನೆ ಎಂದಿದ್ದಾರೆ.

ಬೆಂಗಳೂರು: ಬಿಡದಿ ಟೌನ್​ಶಿಪ್​ ವಿವಾದದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಇದೀಗ ನೈಸ್​ ಟೋಲ್​ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್​ಗೆ ಬಹಿರಂಗ ಸವಾಲು ಹಾಕಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನೈಸ್​ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಿಎಂ, ಕುಮಾರಸ್ವಾಮಿ ಅವರ ಯೋಜನೆಯನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು. ಇದಕ್ಕೆ ತಿರುಗೇಟು ನೀಡಿರುವ ಎಚ್​ಡಿಕೆ, ರಾಜ್ಯದಲ್ಲಿ ಯೋಜನೆಗಳ‌ ಹೆಸರಿನಲ್ಲಿ ರೈತರ ಜತೆ ಚೆಲ್ಲಾಟ ಆಡುತ್ತಿರುವ ರಾಜ್ಯ ಸರ್ಕಾರ ಗುಲಾಮಗಿರಿಯಲ್ಲಿ ಕೆಲಸ ಮಾಡುತ್ತಿದೆ. ಈ ಮಾಹಿತಿಯನ್ನು ನಾಡಿನ ಜನರ ಮುಂದೆ ದಾಖಲೆ ಸಮೇತ ಮುಂದಿಡುತ್ತೇನೆ ಎಂದಿದ್ದಾರೆ.

ಕೋಲ್ ಹಗರಣಕ್ಕಿಂತಲೂ ದೊಡ್ಡ ಸ್ಕ್ಯಾಮ್

ಇದು ಕುಮಾರಸ್ವಾಮಿ, ದೇವೇಗೌಡರ ಕೂಸು ಅಂತ ದೂಷಿಸುತ್ತಾರೆ. ಇದನ್ನೆಲ್ಲ ಚರ್ಚೆ ಮಾಡೋ ಇಂದಿನ ಸಿಎಂ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅದ್ಯಕ್ಷರು ಯುವಕರ ಜತೆ ಸಂವಾದದಲ್ಲಿ ಕೇಂದ್ರ ಸರ್ಕಾರ, ಸಂಸ್ಥೆಗಳ ಬಗ್ಗೆ ಪ್ರೆಸೆಂಟೇಷನ್ ಇಡ್ತಾರೆ. ಕೋಲ್ ಹಗರಣಕ್ಕಿಂತಲೂ ಇದು ದೊಡ್ಡ ಸ್ಕ್ಯಾಮ್. ಈ ಸ್ಕ್ಯಾಮ್ ಬಗ್ಗೆ ಖುದ್ದಾಗಿ ಹೈಕೋರ್ಟ್​ನಲ್ಲಿ ಕೆಲ ಅಬ್ಸರ್ವೇಷನ್ ಮಾಡಲಾಗಿದೆ. ಸರ್ಕಾರಕ್ಕೆ ತಪ್ಪು ಹೆಜ್ಜೆ ಇಡುತ್ತಿದ್ದೀರಿ. ಹಗರಣಗಳ ಬಗ್ಗೆ ಸರ್ಕಾರವು ಬೆಂಬಲ ಕೊಡುತ್ತಿದೆ ಎಂಬ ಅನುಮಾನದ ಮೇಲೆ ಅಬ್ಸರ್ವ್ ಮಾಡುತ್ತಿದೆ ಎಂದರು.

ಅದೇ ಮೆಟ್ಟಿಲ ಮೇಲೆ ಚರ್ಚೆ

1995ರಿಂದ ನೈಸ್ ಯೋಜನೆ ಬಗ್ಗೆ ಸರ್ಕಾರದ ತೀರ್ಮಾನದ ಬಗ್ಗೆ ದಾಖಲೆ ನಿಮ್ಮ ಮುಂದೆ ಇಡುತ್ತೇನೆ. ನೈಸ್ ನಡೆದು ಬಂದ ದಾರಿಯ ಕುರಿತಾಗಿ ವಿಧಾನಸೌದದ ಮೆಟ್ಟಿಲು ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸರ್ಕಾರ ರೆಡಿಯಿದ್ದರೆ ಅದೇ ಮೆಟ್ಟಿಲ ಮೇಲೆ ಚರ್ಚೆ ಮಾಡಲು ನಾವು ತಯಾರಿದ್ದೇವೆ. ದೇವೇಗೌಡರ ಕಾಲದಲ್ಲಿ ಶುರುವಾಗಿದ್ದು, ಬೆಂಗಳೂರು ಮೈಸೂರು ಅಭಿವೃದ್ಧಿ ಕಾರಿಡಾರ್ ಅಗಿತ್ತು. ಸಹಿ ಹಾಕಿದ್ದೆ ದೇವೇಗೌಡ್ರು ಎಂದು ಸಿಎಂ ಹೇಳ್ತಾರೆ. ಅವರು ಸಹಿ ಹಾಕಿದಾಗೆ ನಾವು ಮಾಡುತ್ತಿದ್ದೇವೆ ಅಂತಿದ್ದಾರೆ ಮುಖ್ಯಮಂತ್ರಿಗಳು ಎಂದು ಗರಂ ಆಗಿದ್ದಾರೆ.

ಫೆಬ್ರವರಿ 20, 1995...

ಮೊದಲು ಆಗಿದ್ದು ನೈಸ್ ಕಂಪನಿ ಅಲ್ಲ. ಅದು ವಿಹೆಚ್​ಬಿ, ಕಲ್ಯಾಣಿ ಗ್ರೂಪ್ ಅಫ್ ಕಂಪನಿ, ಸ್ಲಾಬ್ ಇಂಜಿನಿಯರಿಂಗ್ ಕಂಪನಿ ಜತೆ ಸಹಿ ಹಾಕಿದ್ದು ಮಾತ್ರ ದೇವೇಗೌಡ್ರು. ಮೂರು ಕಂಪನಿಗಳು ಎಮ್​ಒಯು (MoU) ಮಾಡಿಕೊಂಡಿದ್ದು, ಇದಕ್ಕೆ ದೇವೇಗೌಡ್ರು ಸಹಿ ಹಾಕಿದ್ದರು. ಫೆಬ್ರವರಿ 20, 1995ರಲ್ಲಿ ಒಪ್ಪಂದವಾಗಿದ್ದು. ಮೇ ತಿಂಗಳಲ್ಲಿ ಈ ಕಂಪನಿ ಹಲವಾರು ಪತ್ರ ವ್ಯವಹಾರ ಮಾಡುತ್ತೆ. ನಮ್ಮ ಯೋಜನೆಗೆ ಭೂಮಿ‌ ಬೇಕು ಡಿಪಿಆರ್ ಬಗ್ಗೆ ಲಾಭ ನಷ್ಟದ ಚರ್ಚೆ ಕೂಡ ನಡೆಸುತ್ತೆ. ಕಂಪನಿಯವರು ವರದಿ ಕೊಟ್ಟ ಮೇಲೆಯೇ ದೇವೇಗೌಡರ ಸಚಿವ ಸಂಪುಟದಲ್ಲಿ ಐದು ಪಟ್ಟಣಗಳನ್ನು ಟೌನ್​ಶಿಪ್​ಗೆ ಮಾತ್ರ ಅನುಷ್ಠಾನ ತರೋದಕ್ಕೆ ಚರ್ಚೆ 8/11/95ರಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಆಯಿತು.

30 ವರ್ಷಗಳ ಸ್ವಾಧೀನ ನಿರ್ವಹಣೆಗೆ ಖರ್ಚು ವೆಚ್ಚ, ಟೋಲ್ ಸಂಗ್ರಹಣೆ ಮಾಡಿಕೊಳ್ಳಬೇಕು. ಭೂಮಿ ಸ್ವಾದೀನದ ವೆಚ್ಚವನ್ನು ಅವರೇ ಭರಿಸಬೇಕಿತ್ತು. ಲಾಭದಾಯಕವಾಗಿ ಮಾಡಲು ಏಳು ಉಪನಗರ ನಿರ್ಮಾಣ ಪ್ರಾಸ್ತಾವನೆ ಆಯಿತು. ಇನ್ನು, ನಿಯಮಗಳನ್ನು ಹಾಕಿ ಅವತ್ತಿನ ಯೋಜನೆಗೆ ಅನುಮತಿ ಕೊಟ್ಟಿದ್ದು ಅವತ್ತಿನ ದೇವೇಗೌಡರ ಸರ್ಕಾರ. ಆಗ ಬಜೆಟ್ ವರ್ಷಕ್ಕೆ ಮೂರು ಸಾವಿರ ಕೋಟಿ ಇತ್ತು. ಅದೇ, ಈಗ ಬಜೆಟ್ ಹಲವಾರು ಬದಲಾವಣೆಗೊಂಡಿದೆ. ಜೆ.ಹೆಚ್. ಪಾಟೀಲ್ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಯೋಜನೆಗೆ ಭಾರತ್ ಫೋರ್ ಲಿಮಿಟೆಡ್​ಗೆ 1997ರಲ್ಲಿ ಕೊಟ್ಟಿದ್ರು ಎಂದರು.

ಆಗ ಇನ್ನು ನೈಸ್ ಬಂದಿರಲೇ ಇರಲಿಲ್ಲ. ರಾಜ್ಯವನ್ನು ನೈಸ್ ಮಾಡೊದಕ್ಕೆ 3/4/1997ರಲ್ಲಿ ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆ ಅಗ್ರಿಮೆಂಟ್ ಆಯಿತು. ಡಿಪಿಆರ್ ಮಾಡಿ ಭೂಸ್ವಾಧೀನಕ್ಕೆ ಕೃಷಿಗೆ ಉತ್ತಮವಾದ ಫಲವತ್ತಾದ ಭೂಮಿಯನ್ನು ಗುರುತಿಸಿರಲಿಲ್ಲಾ. ಡ್ರೈ ಲ್ಯಾಂಡ್ ಪಡೆಯಲು ಅವತ್ತು ತಿರ್ಮಾನ ಮಾಡಿರುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.