ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗುರಪ್ಪ (70) ದಾರುಣ ಸಾವು
- ಬೆಂಗಳೂರಿನ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ಅವಘಡ
- ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗುರಪ್ಪ (70) ದಾರುಣ ಸಾವು
- ಬಿಎಂಆರ್‌ಸಿಎಲ್‌ನಿಂದ ತನಿಖೆಗೆ ಆದೇಶ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿಯಂತಿರುವ ನಮ್ಮ ಮೆಟ್ರೋ ಇತ್ತೀಚೆಗೆ ಕೆಲ ಅಹಿತಕರ ಘಟನೆಗಳ ಮೂಲಕ ಅಪಖ್ಯಾತಿಗೆ ಗುರಿಯಾಗುತ್ತಿದೆ. ಕೆಲ ದಿನಗಳ ಹಿಂದೆ ನಾಗಸಂದ್ರದ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ, ಶುಕ್ರವಾರ (ಜೂ. 26) ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶದಿಂದ (Labour Electrocuted in Metro Station) ಕಾರ್ಮಿಕನ ದಾರುಣ ಸಾವಾಗಿದೆ.
ಟ್ರಿನಿಟಿ ಮೆಟ್ರೋ ನಿಲ್ದಾಣದ ಮೆಟ್ರೋ ಕಂಬಗಳಿಗೆ ವಿದ್ಯುತ್ ಸಂಪರ್ಕದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ, ವಿದ್ಯುತ್ ಅಫಘಾತ ಸಂಭವಿಸಿದ್ದು, ಗುತ್ತಿಗೆ ಕಾರ್ಮಿಕ ಗುರಪ್ಪ (70) ಸಾವನ್ನಪ್ಪಿರುವುದು ವರದಿಯಾಗಿದೆ.
ವಿಡಿಯೋ ವೈರಲ್!
ಈ ಅಫಘಾತದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜನರು ಮೆಟ್ರೋ ಆಡಳಿತ ವರ್ಗದ ಮೇಲೆ ಕೆಂಡಕಾರುತ್ತಿದ್ದಾರೆ.
ಈ ಘಟನೆಯು ಶುಕ್ರವಾರ ಮಧ್ಯಾಹ್ನ 3:30 - 4:00 ರ ಸಮಯದಲ್ಲಿ ನಡೆದಿದ್ದು, ಪಿಲ್ಲರ್ ನ. 153 ರಲ್ಲಿ ವಿದ್ಯುತ್ ಸಂಪರ್ಕ ನೀಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
https://x.com/dpkBopanna/status/2070694886899433629?s=20
ವಿದ್ಯುತ್ ಸಂಪರ್ಕಕ್ಕೆ ಬಂದ ಗುರಪ್ಪ ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಗುರಪ್ಪನನ್ನು ಹತ್ತಿರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಗುರಪ್ಪ ಮೃತಪಟ್ಟಿದ್ದಾಗಿ ಧೃಡಿಕರಿಸಿದ್ದಾರೆ.
ಬಿಎಮ್ಆರ್ಸಿಎಲ್ ನಿಂದ ತನಿಖೆ!
ಈ ದುರ್ಘಟನೆ ನಡೆಯಲು ನಿಖರವಾದ ಕಾರಣವೇನು? ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಲಾಗಿತ್ತೆ? ಅಥವಾ ಇದೊಂದು ಆಕಸ್ಮಿಕ ಘಟನೆಯೇ? ಎಂದು ತಿಳಿಯಲು ಮೆಟ್ರೋ ಆಡಳಿತ ಮಂಡಳಿಯಾದ ಬಿಎಮ್ಆರ್ಸಿಎಲ್ ಸಮಗ್ರ ತನಿಖೆಗೆ ಆದೇಶಿಸಿದೆ. ತನಿಖೆ ಮುಗಿದ ನಂತರ ವರದಿಯನ್ನು ನೀಡಲಾಗುದೆಂದು ಬಿಎಮ್ಆರ್ಸಿಎಲ್ ತಿಳಿಸಿದ್ದು, ಮೃತ ಗುರಪ್ಪನ ಸಾವಿಗೆ ಸಂತಾಪ ಸೂಚಿಸಿದೆ, (ಏಜನ್ಸೀಸ್).